ಈಶ್ವರಮಂಗಲ: ಹಿಂದೂ ಜಾಗರಣ ವೇದಿಕೆಯಿಂದ ಅಪಘಾತದಲ್ಲಿ ಗಾಯಗೊಂಡ ಸುಜಿತ್ ಗಾಳಿಮುಖ ಕುಟುಂಬಕ್ಕೆ ಧನಸಹಾಯ

0

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಈಶ್ವರಮಂಗಲ ಘಟಕದ ಸಕ್ರಿಯ ಕಾರ್ಯಕರ್ತ ಸುಜಿತ್ ಗಾಳಿಮುಖ ಅವರ ಪತ್ನಿ ಮತ್ತು ಮಗು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಚಿಕಿತ್ಸೆಗಾಗಿ ಜಾಗರಣ ಸೇವಾ ನಿಧಿಯ ಮೂಲಕ ಊರ ಹಾಗೂ ಪರವೂರ ಸಹೃದಯಿ ದಾನಿಗಳಿಂದ ಹಣವನ್ನು ಸಂಗ್ರಹಸಲಾಗಿತ್ತು. ಮೊದಲ ಹಂತದಲ್ಲಿ ಸಂಗ್ರಹವಾದ ಸುಮಾರು 1 ಲಕ್ಷ ರೂಪಾಯಿಯನ್ನು ಸಂಘಟನೆಯ ಗೌರವಾಧ್ಯಕ್ಷ ಕೃಷ್ಣ ಭಟ್ ಮುಂಡ್ಯ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸುಜಿತ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಇದಕ್ಕೂ ಮುನ್ನ ಗ್ರಾಮಾಧಿಪತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here