ಪುತ್ತೂರಿನಲ್ಲಿ ದ.ಕ ಜಿಲ್ಲಾ ಶಾಲಾ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

0

ಕ್ರೀಡಾ ಕ್ಷೇತ್ರದಲ್ಲಿ ತೊಡಗಿದವರು ಶೈಕ್ಷಣಿಕ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ – ಪದ್ಮನಾಭ ಶೆಟ್ಟಿ
ಮಕ್ಕಳಿಗ ಮೊಬೈಲ್ ಬದಲು ಮೈದಾನದಲ್ಲಿ ಆಟವಾಡಲು ಬಿಡಿ- ಪ್ರದೀಪ್ ಡಿಸೋಜ
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಮುಂದೆ ಬರಬೇಕು – ರೇ ವಿಜಯ ಹಾರ್ವೀನ್
ಮಕ್ಕಳನ್ನು ಕೇಂದ್ರೀಕರಿಸಿ ಕ್ರೀಡೆ – ಬಿ.ಎಸ್ ಸತೀಶ್ ಕುಮಾರ್

ಪುತ್ತೂರು: ಕ್ರೀಡೆ ದೈಹಿಕ ಮತ್ತು ಮಾನಸಿಕವಾಗಿಯು ಬಹಳ ಅಗತ್ಯ. ಇಂತಹ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿದವರು ಶೈಕ್ಷಣಿಕ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಎಲ್ಲರು ಅರಿತುಕೊಳ್ಳಬೇಕೆಂದು ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಹೇಳಿದರು.


ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆ ಪುತ್ತೂರು ಇವರ ಸಹಯೋಗದೊಂದಿಗೆ ಜ.6 ರಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ 14, 17 ಮತ್ತು 19 ವರ್ಷ ವಯೋಮಾನದ ದ.ಕ ಜಿಲ್ಲಾ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿಗಿನ ದಿನ ವಾಲಿಬಾಲ್‌ಗೆ ಪ್ರಾಮುಖ್ಯತೆ ಕಡಿಮೆ ಆಗುತ್ತಾ ಎಂಬ ಸಣ್ಣ ಚಿಂತನೆಯ ನಡುವೆ ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆ ಅತ್ಯಂತ ಯಶಸ್ವಿಯಾಗಿ ಜಿಲ್ಲಾ ಮಟ್ಟದಲ್ಲಿ ಇಂತಹ ಸ್ಪರ್ಧೆಯನ್ನು ಆಯೋಜನೆಯನ್ನು ಮಾಡುವ ಮೂಲಕ ರಾಜ್ಯ, ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ಕೊಡುತ್ತಿದ್ದಾರೆ ಎಂದರು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವ ಈ ಕ್ರೀಡೆ ಶೈಕ್ಷಣಿಕ ವಿಚಾರದಲ್ಲೂ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.


ಮಕ್ಕಳಿಗ ಮೊಬೈಲ್ ಬದಲು ಮೈದಾನದಲ್ಲಿ ಆಟವಾಡಲು ಬಿಡಿ:
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಅವರು ಮಾತನಾಡಿ ಇವತ್ತು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಅವರನ್ನು ಮೈದಾನದಲ್ಲಿ ಆಟವಾಡಲು ಬಿಡಿ. ಇವತ್ತು ಮಕ್ಕಳನ್ನು ಆಟವಾಡಲು ಬಿಡಿ ಬಿಸಿಲಿಗೆ ಹೋಗಲು ಕೂಡಾ ಬಿಡದ ಪೋಷಕರಿದ್ದಾರೆ. ಇದು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ತೊಂದರೆ ಆಗಬಹುದು. ಈ ನಿಟ್ಟಿನಲ್ಲಿ ಮಕ್ಕಳನ್ನು ಮೈದಾನದಲ್ಲಿ ಆಟವಾಡಲು ಅವಕಾಶ ನೀಡಿ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಸುದಾನ ವಿದ್ಯಾಸಂಸ್ಥೆ ಎಲ್ಲಾ ಕ್ರೀಡೆಗಳಿಗೂ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರ ಜೊತೆಗೆ ಮಕ್ಕಳಿಂದಲೇ ವಾಲಿಬಾಲ್ ಪಟುಗಳನ್ನು ಹೊರ ಹೊಮ್ಮಿಸುವ ನಿಟ್ಟಿನಲ್ಲಿ ಸಂಘಟಕ ಸತೀಶ್ ಅವರು ಸಿಸ್ಟಮೆಟಿಕ್ ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಮುಂದೆ ಬರಬೇಕು:
ವಾಲಿಬಾಲ್ ಸಂಸ್ಥೆಯ ಗೌರವಾಧ್ಯಕ್ಷ ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವೀನ್ ಅವರು ಮಾತನಾಡಿ ದೇಹದಲ್ಲಿ ಆರೋಗ್ಯ ಸಮತೋಲನ ಮಾಡಲು ಕ್ರೀಡೆ ಬಹಳ ಅಗತ್ಯ. ಇಂತಹ ಆರೋಗ್ಯ ಸಮತೋಲನದಿಂದ ಶಿಕ್ಷಣ ಕ್ಷೇತ್ರದಲ್ಲೂ ಮುಂದೆ ಹೋಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮುಂದೆ ಬರಬೇಕು. ದೇಶಕ್ಕೆ ಹೆಮ್ಮೆ ತರಬೇಕೆಂದರು.


ಸನ್ಮಾನ:
ವಿದ್ಯೆ, ಕಲೆ, ಯುವಜನೋತ್ಸವ, ವೈದ್ಯಕೀಯ ಶಿಬಿರ, ಕ್ರೀಡಾಕೂಟಕ್ಕೆ ಪೂರ್ಣ ಮಟ್ಟದಲ್ಲಿ ಸಹಕಾರ ನೀಡುತ್ತಿರುವ ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವೀನ್ ಅವರನ್ನು ಕ್ರೀಡಾ ಕೂಟದಲ್ಲಿ ವಾಲಿಬಾಲ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.


ಮಕ್ಕಳನ್ನು ಕೇಂದ್ರೀಕರಿಸಿ ಕ್ರೀಡೆ:
ಕ್ರೀಡಾಕೂಟ ಸಭಾ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್ ಸತೀಶ್ ಕುಮಾರ್ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯವರು ಇವತ್ತು ವಾಲಿಬಾಲ್‌ನಿಂದ ಮಿಂಚುತ್ತಿದ್ದಾರೆ. ನಿರಂತರ ತರಬೇತಿಯಿಂದ ಇದು ಸಾಧ್ಯವಾಗಿದೆ. ಬಹಳ ವರ್ಷದಿಂದ ಅಸೋಸಿಯೇಶನ್ ಮೂಲಕ ತರಬೇತಿ ನೀಡಿದ ಪ್ರಯೋಗ ಈಗ ಬರುತ್ತಿದೆ. ಕಳೆದ ವಾರದ ಹಿಂದೆ ಮಂಗಳೂರು ಯುನಿರ್ವಸಿಟಿ 4ನೇ ಸ್ಥಾನ ಪಡೆದಿದೆ. ಇತ್ತೀಚೆಗೆ ಶೇ.50ಕ್ಕೂ ಮಿಕ್ಕಿ ದ.ಕ.ಜಿಲ್ಲೆಯವರೇ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿರುವ ಹೆಚ್ಚಿನ ತಂಡದಲ್ಲಿ ದಕ್ಷಿಣ ಕನ್ನಡದವರೇ ಹೆಚ್ಚಿದ್ದಾರೆ. ಇದಕ್ಕೆ ಎಳವೆಯಿಂದಲೇ ವಾಲಿಬಾಲ್ ತರಬೇತಿ ಕಾರಣವಾಗಿದೆ. ಹಾಗಾಗಿ ಮಕ್ಕಳನ್ನು ಕೇಂದ್ರವಾಗಿಟ್ಟು ಕೊಂಡು ಈ ಕ್ರೀಡೆ ಮಾಡುತ್ತಿದ್ದೇವೆ ಎಂದರು.

ವಾಲಿಬಾಲ್ ಸಂಸ್ಥೆಯ ಉಪಾಧ್ಯಕ್ಷೆ ದೈಹಿಕ ಶಿಕ್ಷಣ ಶಿಕ್ಷಕಿ ಲಿಲ್ಲಿ ಪಾಯಸ್, ಲಗೋರಿ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು, ವಾಲಿಬಾಲ್ ಸಂಸ್ಥೆಯ ತಾಲೂಕು ಅಧ್ಯಕ್ಷ ಸತೀಶ್ ರೈ ಕಟ್ಟಾವು, ತ್ಯಾಗಮ್ ಹರೇಕಲ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಮಾಮಚ್ಚನ್, ಸುದಾನ ವಸತಿಯುತ ಶಾಲೆಯ ಮುಖ್ಯಗುರು ಶೋಭಾನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಲಿಬಾಲ್ ಅಸೋಸೆಯೇಶನ್ ಅವರ ರೆಫ್ರಿ ಬೋರ್ಡ್ ನ ನಿರ್ಣಾಯಕ ಮೋನಪ್ಪ ಪಟ್ಟೆ, ಶಿವರಾಮ ಭಟ್, ಕಾರ್ಯದರ್ಶಿ ಬಾಬು ಮಾಸ್ತರ್, ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ, ಸಂಜೀವ ಪೂಜಾರಿ, ಪುಷ್ಪರಾಜ್, ಗಾಯಾತ್ರಿ, ಪದವಿದರ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ಸುದಾನ ವಿದ್ಯಾ ಸಂಸ್ಥೆಯ ಸಹಶಿಕ್ಷಕ ನವೀನ್ ಅತಿಥಿಗಳನ್ನು ಗೌರವಿಸಿದರು. ಸುದಾನ ವಸತಿಯುತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಹೈದರ್ ಕೈರಂಗಳ ಸ್ವಾಗತಿಸಿದರು. ಪುತ್ತೂರು ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಬಾಬು ಮಾಸ್ತರ್ ವಂದಿಸಿದರು. ಪುತ್ತೂರು ಯುವ ಸಬಲೀಕರಣ ಮತ್ತು ಯುವಜನ ಸೇವಾ ಇಲಾಖೆಯ ನಿವೃತ್ತ ಕ್ರೀಡಾಧಿಕಾರಿ ಜಯರಾಮ ಗೌಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here