ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ-ಬಿ.ವಿ ಸೂರ್ಯನಾರಾಯಣ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಎಸ್.ಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಎಲಿಯ ಮಾತನಾಡಿ, ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು, ಕೆಡುಕು ಮತ್ತು ಒಳಿತುಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರನ್ನು ಹಾದಿ ತಪ್ಪದಂತೆ ಎಚ್ಚರಿಸುವ ಕೆಲಸ ನಿರಂತರ ಆಗಬೇಕು ಎಂದು ಹೇಳಿದರು. ಕೆಮ್ಮಿಂಜೆ ವಲಯ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಶುಭ ಹಾರೈಸಿದರು.
ಭಕ್ತಕೋಡಿ ಒಕ್ಕೂಟದ ಅಧ್ಯಕ್ಷ ಶಶಿಧರ್ ಎಸ್.ಡಿ, ಜ್ಞಾನ ವಿಕಾಸ ಸಂಯೋಜಕಿ ಕುಶಲ, ವಿಪತ್ತು ನಿರ್ವಹಣಾ ಕ್ಯಾಪ್ಟನ್ ಮನೋಜ್ ಸುವರ್ಣ, ನವಜೀವನ ಗ್ರಾಮ ಸಮಿತಿ ಸದಸ್ಯ ವಸಂತ ಉಪಸ್ಥಿತರಿದ್ದರು. ಎಸ್‌ಜಿಎಂ ಪ್ರೌಢ ಶಾಲಾ ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಚಿತ್ರ ವಂದಿಸಿದರು. ಕೆಮ್ಮಿಂಜೆ ವಲಯ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.