ಕಡಬ: ಚಿಲ್ಲರೆ ಇಲ್ಲ ಎಂಬ ನೆಪವೊಡ್ಡಿ ಕೆಎಸ್ ಆರ್ ಟಿಸಿ ಬಸ್ಸಿನ ನಿರ್ವಾಹಕ ವೃದ್ಧರೋರ್ವರನ್ನು ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗಿರುವ ಪ್ರಕರಣ ಕಡಬ ತಾಲೂಕಿನ ಕಲ್ಲುಗುಡ್ಡೆಯಲ್ಲಿ ನಡೆದಿದೆ.
ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಬಾಬು ಗೌಡ (75ವ.) ಅವರು ಕಾಂಚನಕ್ಕೆಂದು ಬೆಳಿಗ್ಗೆ 9 ಗಂಟೆಗೆ ಕಲ್ಲುಗುಡ್ಡೆಯಿಂದ ಪುತ್ತೂರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ಸಿಗೆ ಕಲ್ಲುಗುಡ್ಡೆಯಲ್ಲಿ ಹತ್ತಿದ್ದರು. ನಿರ್ವಾಹಕರು ಟಿಕೆಟ್ ಗೆ ದುಡ್ಡು ಕೇಳುವಾಗ 200ರೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಬಾಬು ಗೌಡ ಅವರನ್ನು ಕಲ್ಲುಗುಡ್ಡೆಯಿಂದ 2 ಕಿ.ಮೀ ದೂರದ ಗೋಳಿಯಡ್ಕ ಎಂಬಲ್ಲಿ ಬಲವಂತವಾಗಿ ಇಳಿಸಿ ಹೋಗಿರುವುದಾಗಿ ವರದಿಯಾಗಿದೆ.
ಹಿರಿಯ ನಾಗರೀಕರೂ, ಯೋಧರೋರ್ವರ ತಂದೆಯೂ ಆಗಿರುವ ಬಾಬು ಗೌಡ ಅವರನ್ನು ಅರ್ಧ ದಾರಿಯಲ್ಲೇ ಇಳಿಸಿರುವ ನಿರ್ವಾಹಕನ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಬು ಗೌಡ ಅವರು ಮಾತನಾಡಿದ ವಿಡಿಯೋ ಸಹ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ