ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.25 ಹಾಗೂ 26ರಂದು ನಡೆಯಲಿರುವ ಜಾತ್ರೋತ್ಸವ-ಸಂಪ್ಯ ಜಾತ್ರೆಯ ಆಮಂತ್ರಣ ಪತ್ರಿಕೆಯು ಜ.7ರಂದು ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ. ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಆಮಂತ್ರಣ ಬಿಡುಗಡೆಗೊಳಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ. ಮಾತನಾಡಿ, ಜಾತ್ರೆಗೆ ಸೀಮಿತ ದಿನಗಳಿರುವುದು. ಹನ್ನೆರಡು ತಂಡಗಳ ಮೂಲಕ ದೇವಸ್ಥಾನದ ವ್ಯಾಪ್ತಿಯಲ್ಲಿ ಆರುನೂರು ಮನೆಗಳಿಗಳಿದ್ದು ಎಲ್ಲಾ ಮನೆಗಳಿಗೂ ತಲುಪಿಸಲಾಗುವುದು ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ದೇವರ ಜಾತ್ರೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕು. ಎಲ್ಲರಿಗೂ ಆಮಂತ್ರಣ ತಲುಪಿಸಲಾಗುವುದು. ಶಿಬಿರಾರ್ಥಿಗಳು ಭಾಗವಹಿಸಬೇಕು. ದೇವಸ್ಥಾನದಲ್ಲಿ ದೇವರ ಕಾರ್ಯಗಳೇ ಪ್ರಮುಖವಾಗಿದ್ದು ಭಕ್ತರು ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಬೇಕು. ಜಾತ್ರೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ವಿನಂತಿಸಿದರು.
ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಉಮೇಶ್ ಎಸ್.ಕೆ ಸಂಪ್ಯ, ಉಪಾಧ್ಯಕ್ಷ ಶ್ರೀ ಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಲಕ್ಷ್ಮಣ್ ಬೈಲಾಡಿ, ವಿನ್ಯಾಸ್ ಯು.ಎಸ್., ಜಗದೀಶ್, ಪ್ರೇಮ ಶಿವಪ್ಪ, ಪ್ರಮುಖರಾದ ಹರಿಣಿ ಪುತ್ತೂರಾಯ, ಉದಯ ಕುಮಾರ್ ರೈ ಎಸ್ ಸಂಪ್ಯ ಪ್ರವೀಣ್ ಉದಯಗಿರಿ, ನಾಗೇಶ್ ಸಂಪ್ಯ, ರಾಜೇಶ್ ರೈ, ಧನಂಜಯ ರೈ ಮೇರ್ಲ, ಡಾ.ಸಾಯಿಪ್ರಕಾಶ್, ಕುಂಞಣ್ಣ, ಉದಯ ಕುಮಾರ್ ಬಲ್ಲಾಳ್, ನವೀನ್ ಕುಕ್ಕಾಡಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.