ಕಡೇಶಿವಾಲಯ ರೋಟರಿ ಸಮುದಾಯ ದಳದ 35 ನೇ ವರ್ಷದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ

0

ಕಡೇಶಿವಾಲಯ: ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 35 ನೇ ವರ್ಷದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.6ರಂದು ದ. ಕ. ಜಿ. ಪ. ಹಿ. ಪ್ರಾ.ಶಾಲೆ ಪೆರ್ಲಾಪು ಶಾಲಾ ವಠಾರದಲ್ಲಿ ನಡೆಯಿತು.

ರೋಟರಿ ಕ್ಲಬ್ ಬಂಟ್ವಾಳ ಇದರ ನಿಯೋಜಿತ ಅಧ್ಯಕ್ಷ ರೊ|ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು.ಭೂ ಅಭಿವೃದ್ದಿ ಬ್ಯಾಂಕ್ ಬಿ. ಸಿ.ರೋಡ್ ಅಧ್ಯಕ್ಷ ಮತ್ತು ವಕೀಲ ಅರುಣ್ ರೋಶನ್ ಡಿ’ ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಮಾಣಿ ಇದರ ಅಧ್ಯಕ್ಷ ಲ|ಕೂಸಪ್ಪ ಪೂಜಾರಿ ಪುನ್ಕೆದಡಿ, ಜೋನ್‌ ಲೆಫ್ಟಿನೆಂಟ್ ಗವರ್ನರ್ ರೊ|ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು‌, ರೋಟರಿ ಸಮುದಾಯ ದಳದ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಕಡೇಶಿವಾಲಯ ದ.ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಹಾಗೂ ಸರಕಾರಿ ಪ್ರೌಡಶಾಲೆ ಕಡೇಶಿವಾಲಯದಲ್ಲಿ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭೆಗಳನ್ನು ಪುರಸ್ಕರಿಸಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಭವಾನಿ ನೆಕ್ಕಿಲಾಡಿ , ದ. ಕ. ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಸರಕಾರಿ ಪ್ರೌಢಶಾಲೆ ಕಡೇಶಿವಾಲಯದ ಶಿಕ್ಷಕಿ ಕುಮಾರಿ ಗೀತಾರವರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಜಿ. ವಿ. ಡ್ಯಾನ್ಸ್ ಕ್ರಿವ್ ಕಡೇಶಿವಾಲಯ ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಶಾರದಾ ಆರ್ಟ್ಸ್ ಐಸಿರಿ ಕಲಾವಿದರ್ ಮಂಜೇಶ್ವರ ಅಭಿನಯದ “ಮಲ್ಲ ಸಂಗತಿಯೇ ಅತ್ತು” ಎಂಬ ನಾಟಕ ಪ್ರದರ್ಶನ ನಡೆಯಿತು.


ಸಂಸ್ಥೆಯ ಸಲಹಾ ಸಮಿತಿಯ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ,ಸಂಸ್ಥೆಯ ಕಾರ್ಯದರ್ಶಿ ಜಹೀರ್ ಪ್ರತಾಪನಗರ ವಂದಿಸಿ, ನವೀನ್ ನಾಯ್ಕ್ ಪಿಳಿಂಗಳ ಮತ್ತು ಯೋಗೀಶ್ ನಾಯ್ಕ್ ಡಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here