ಜ.17,18: ಇಡ್ಯಾಡಿ ಶಿವಣ್ಣ ಗೌಡರವರ ತರವಾಡು ಮನೆಯಲ್ಲಿ ನೇಮೋತ್ಸವ

0

ಪುತ್ತೂರು: ಸವಣೂರು ಗ್ರಾಮದ ಇಡ್ಯಾಡಿ ಶಿವಣ್ಣ ಗೌಡರವರ ತರವಾಡು ಮನೆಯಲ್ಲಿ ಜ.17 ಮತ್ತು 18 ರಂದು ನೇಮೋತ್ಸವ ನಡೆಯಲಿದೆ. ರುದ್ರಚಾಮುಂಡಿ, ಗುಳಿಗ, ವರ್ಣಾರ ಪಂಜುರ್ಲಿ, ಸತ್ಯಜಾವತೆ, ಕುಪ್ಪೆ ಪಂಜುರ್ಲಿ ಕಲ್ಲುರ್ಟಿ, ಕಲ್ಲುರ್ಟಿ ಮತ್ತು ಕೊರತಿ, ಗುಳಿಗ ದೈವಗಳನೇಮೋತ್ಸವ ಜರಗಲಿದೆ.

ಕಾರ್ಯಕ್ರಮಗಳು:
ಜ. 17 ರಂದು ಬುಧವಾರ ಬೆಳಿಗ್ಗೆ : ಶ್ರೀ ವೆಂಕಟರಮಣ ದೇವರ ಹರಿಸೇವೆ, ಗಣಹೋಮ ಅಪರಾಹ್ನ ಗಂಟೆ 3.30ಕ್ಕೆ ದೈವಗಳ ಭಂಡಾರ ತೆಗೆದು ನೇಮೋತ್ಸವ. ಜ. 18 ಗುರುವಾರ ಬೆಳಿಗ್ಗೆ ಧರ್ಮದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀಮತಿ ಮತ್ತು ಶ್ರೀ ಶಿವಣ್ಣ ಗೌಡ ಇಡ್ಯಾಡಿ ಮತ್ತು ಸಹೋದರರು ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here