ಇಡ್ಯಾಡಿ ಶಿವಣ್ಣ ಗೌಡರವರ ತರವಾಡು ಮನೆಯಲ್ಲಿ ನೇಮೋತ್ಸವ

0

ಪುತ್ತೂರು: ಸವಣೂರು ಗ್ರಾಮದ ಇಡ್ಯಾಡಿ ಶಿವಣ್ಣ ಗೌಡರವರ ತರವಾಡು ಮನೆಯಲ್ಲಿ ಜ.17 ಮತ್ತು 18ರಂದು ನೇಮೋತ್ಸವ ನಡೆಯಿತು.
ನೇಮೋತ್ಸವದಲ್ಲಿ ರುದ್ರಚಾಮುಂಡಿ, ಗುಳಿಗ, ವರ್ಣಾರ ಪಂಜುರ್ಲಿ, ಸತ್ಯಜಾವತೆ, ಕುಪ್ಪೆ ಪಂಜುರ್ಲಿ ಕಲ್ಲುರ್ಟಿ, ಕಲ್ಲುರ್ಟಿ ಮತ್ತು ಕೊರತಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.

ಕಾರ್ಯಕ್ರಮಗಳು:
ಜ.17ರಂದು ಬೆಳಿಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ಗಣಹೋಮ ಅಪರಾಹ್ನ ಗಂಟೆ3.30ಕ್ಕೆ ದೈವಗಳ ಭಂಡಾರ ತೆಗೆದು ನೇಮೋತ್ಸವ ಜರಗಿತು. ಜ. 18 ಬೆಳಿಗ್ಗೆ ಧರ್ಮದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1 ಗಂಟೆಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀಮತಿ ಮತ್ತು ಶ್ರೀ ಶಿವಣ್ಣ ಗೌಡ ಇಡ್ಯಾಡಿ ಮತ್ತು ಸಹೋದರರು ಮತ್ತು ಕುಟುಂಬಸ್ಥರು ಕಾರ್‍ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರುಗಳು, ಊರ-ಪರವೂರ ಹಿತೈಷಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here