ಬೆಂಗಳೂರಿನ ಕಂಬಳದಂತೆ ಸಿಝ್ಲರ್ ಟ್ರೋಫಿ ಇತಿಹಾಸದ ಪುಟದಲ್ಲಿ ಕಂಗೊಳಿಸಿದೆ-ಅಶೋಕ್ ರೈ
ಪುತ್ತೂರು: ಪುತ್ತೂರು ಅಭಿವೃದ್ದಿಯತ್ತ ಸಾಗುತ್ತಿದೆ. ಇತ್ತೀಚೆಗೆ ನಡೆದ ಬೆಂಗಳೂರು ಕಂಬಳವು ಹೇಗೆ ಇತಿಹಾಸದ ಪುಟವನ್ನು ಸೇರಿದೆಯೋ ಹಾಗೆಯೇ ಪುತ್ತೂರಿನ ಸಿಝ್ಲರ್ ಟ್ರೋಫಿ ಕೂಡ ಇತಿಹಾಸದ ಪುಟದಲ್ಲಿ ಕಂಗೊಳಿಸುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.
ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇದರ ಜಂಟಿ ಆಶ್ರಯದಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ದಿ|ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಅಹರ್ನಿಶಿ ರಾಷ್ಟಮಟ್ಟದ ಆಹ್ವಾನಿತ ಎಂಟು ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್‌ನಲ್ಲಿನ ಕ್ರೀಡಾಂಗಣದಲ್ಲಿ ಜ.20 ಹಾಗೂ 21ರಂದು ಎರಡು ದಿನಗಳ `ಸಿಝ್ಲರ್ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಂಡರ್ ಆರ್ಮ್ ಪಂದ್ಯಾಟಗಳು ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಓವರ್ ಆರ್ಮ್‌ನತ್ತ ವಾಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಮುಂದಿನ ದಿನಗಳಲ್ಲಿ ಪುತ್ತೂರಿನ ಯುವಕ ಭಾರತ ತಂಡದಲ್ಲಿ ಗುರುತಿಸುವಂತಾಗಲಿ. ಪ್ರಸನ್ನ ಶೆಟ್ಟಿರವರ ನೇತೃತ್ವದಲ್ಲಿ ಇಂತಹ ಕ್ರಿಕೆಟ್ ಟೂರ್ನಿಯನ್ನು ಸಂಘಟಿಸುವುದರ ಜೊತೆಗೆ ಅಶಕ್ತರ ಬಾಳಿಗೂ ನೆರವಾಗುತ್ತಿರುವುದು ಅಭಿನಂದನೀಯ ವಿಚಾರವಾಗಿದ್ದು ನಿಮ್ಮೊಂದಿಗೆ ಈ ಅಶೋಕ್ ರೈ ಎಂದೆಂದಿಗೂ ಇದ್ದೇನೆ ಎಂದರು.
ಅಣ್ಣನ ಸ್ಥಾನದಲ್ಲಿ ಸಿಝ್ಲರ್ ಪಚ್ಚುವನ್ನರವರಿದ್ದಾರೆ-ಮಿಥುನ್ ರೈ:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಅಣ್ಣನ ಸ್ಥಾನದಲ್ಲಿರುವ ಸಿಝ್ಲರ್ ಪಚ್ಚುವನ್ನರವರ ನಾಯಕತ್ವದಡಿಯಲ್ಲಿ ಉತ್ತಮ ರೀತಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಸಂಘಟಿಸಿರುವುದು ಶ್ಲಾಘನೀಯ. ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಂದಾಪುರವು ಓವರ್ ಆರ್ಮ್‌ಗೆ ಪ್ರಖ್ಯಾತಿ ಪಡೆದರೆ ಬಳಿಕದ ಸ್ಥಾನವಿರುವುದು ದ.ಕ ಜಿಲ್ಲೆಗೆ. ಸಂಘಟಕರು ಯುವ ಪ್ರತಿಭೆಗಳಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸಿರುವುದು ಮತ್ತೂ ಶ್ಲಾಘನೀಯ. ಕ್ರೀಡೆಯಿಂದ ಸೌಹಾರ್ದತೆ ಹಾಗೂ ಒಗ್ಗಟ್ಟು ಮೂಡಿ ಬರಬಲ್ಲುದು ಎಂದರು.
ಪಂದ್ಯಾಟವು ಗೆಳೆತನಕ್ಕೆ ಸಾಕ್ಷಿಯಾಗಿದೆ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಂತರ್ರಾಷ್ಟ್ರೀಯ ಕ್ರಿಕೆಟ್‌ನಂತೆ ಇಲ್ಲಿ ಹೆಲ್ಮೆಟ್, ಗ್ಲೌಸ್, ಪ್ಯಾಡ್ ಇಲ್ಲದಿದ್ದರೂ ಒಂದು ಅಂತರ್ರಾಷ್ಟ್ರೀಯ ಪಂದ್ಯದಂತೆ ಗೋಚರಿಸುವತ್ತ ಮಾಡಿರುವುದು ಪ್ರಸನ್ನ ಶೆಟ್ಟಿರವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಸಿಝ್ಲರ್ ಗ್ರೂಪ್ಸ್ ಒಡನಾಡಿಯಾಗಿದ್ದು, ಕಳೆದ ವರ್ಷ ಅಗಲಿದ ದಿ.ಶ್ರೀನಾಥ್ ಆಚಾರ್ಯರವರ ಸ್ಮರಣಾರ್ಥ ಈ ಪಂದ್ಯಾಟ ನಡೆಸಿರುವುದು ಗೆಳೆತನಕ್ಕೆ ಯಾವ ರೀತಿಯಾಗಿ ಮಾದರಿಯಾಗಬೇಕು ಎನ್ನುವುದಕ್ಕೆ ಪ್ರಸನ್ನ ಶೆಟ್ಟಿಯವರ ತಂಡ ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.
ಕ್ರೀಡೆಯಲ್ಲಿ ಜಾತಿ-ಧರ್ಮ-ರಾಜಕೀಯ ಮೇಳೈಸಬಾರದು-ಎಂ.ಎಸ್ ಮಹಮದ್:
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮದ್ ಮಾತನಾಡಿ, ಕ್ರೀಡೆ ಅನ್ನುವುದು ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಮಾತ್ರವಲ್ಲ ಇದರಲ್ಲಿ ಯಾವುದೇ ಜಾತಿ-ಧರ್ಮ-ರಾಜಕೀಯ ಮೇಳೈಸಬಾರದು. ಪ್ರಸನ್ನ ಶೆಟ್ಟಿರವರ ನಾಯಕತ್ವದಲ್ಲಿ ಕಳೆದ ಐದು ವರ್ಷಗಳಿಂದ ಕ್ರಿಕೆಟ್ ಟೂರ್ನಮೆಂಟ್ ಉತ್ತಮ ರೀತಿಯಲ್ಲಿ ಮೂಡಿ ಬಂದಿರುವುದಾದರೆ ಅವರ ಹಿಂದಿರುವ ಫಲಾಪೇಕ್ಷೆಯಿಲ್ಲದ ತಂಡ ಕಾರಣವಾಗಿದೆ ಎಂದರು.
ಪುತ್ತೂರು ನನ್ನ ಎರಡನೇ ಮನೆ ಇದ್ದಾಗೆ-ನವೀನ್ ಪಡೀಲು:
ತುಳು ರಂಗಭೂಮಿ ಚಿತ್ರನಟ, ಕುಸಲ್ದರಸೆ ನವೀನ್ ಡಿ.ಪಡೀಲು ಮಾತನಾಡಿ, ಪುತ್ತೂರು ನನ್ನ ಎರಡನೇ ಮನೆ ಇದ್ದಾಗೆ. ಪ್ರಸನ್ನ ಶೆಟ್ಟಿಯವರ ಕನಸಿನ ಕೂಸಾದ ಈ ಕ್ರಿಕೆಟ್ ಟೂರ್ನಿಗೆ ಬರಬೇಕು ಎನ್ನುವುದು ನನ್ನ ಆಶಯವಾಗಿತ್ತು. ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರು ವೈಮನಸ್ಸಿನಿಂದ ಆಡದೆ ಸೌಹಾರ್ದತೆಯಾಗಿ ಆಡಿ ಕ್ರೀಡೆಯ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಗಣ್ಯರ ದಂಡು:
ವೇದಿಕೆಯಲ್ಲಿ ಪುತ್ತೂರು ಸಂಚಾರಿ ಠಾಣೆಯ ಪೊಲೀಸ್ ನಿರೀಕ್ಷಕ ಉದಯರವಿ, ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ, ಮಾಯಿದೆ ದೇವುಸ್ ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಉದ್ಯಮಿ ಚಿಕ್ಕಪ್ಪ ನ್ಯಾಕ್ ಅರಿಯಡ್ಕ, ಲೋಕಾಯುಕ್ತ ಎಸ್.ಪಿ ಸೈಮನ್, ಉದ್ಯಮಿ ಸುಧೀರ್ ಪಾಯಿಸ್, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಮಂಗಳೂರು ಕೆ.ಎಂ.ಎಫ್‌ನ ಉಪಾಧ್ಯಕ್ಷ ಜಯರಾಮ್ ರೈ ಎಸ್.ಬಿ, ಹೊಟೇಲ್ ಅಶ್ವಿನಿ ಮಾಲಕ ಕರುಣಾಕರ್ ರೈ, ಸೋಜಾ ಮೆಟಲ್‌ನ ಜೋನ್ ಕುಟಿನ್ಹಾ, ಸಂತ ಫಿಲೋಮಿನಾ ಕಾಲೇಜು ಕ್ಯಾಂಟೀನ್‌ನ ಆನಂದ ಶೆಟ್ಟಿ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜ್‌ನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಕಾಶ್ ಡಿ’ಸೋಜ, ಉಪ್ಪಿನಂಗಡಿ ಜುಪಿಟರ್ ಎಂಟರ್‌ಪ್ರೈಸಸ್‌ನ ಗಣೇಶ್ ಶೆಣೈ, ಚಿಕ್ಕಬಳ್ಳಾಪುರ ಪೊಲೀಸ್ ಅಧಿಕಾರಿ ಪ್ರದೀಪ್ ಪೂಜಾರಿ, ಉದ್ಯಮಿ ಭವಿನ್ ಸಾವ್‌ಜಾನಿ, ಅಕ್ಷಯ ಗ್ರೂಪ್‌ನ ಚೇರ್‌ಮ್ಯಾನ್ ಜಯಂತ ನಡುಬೈಲು, ಸುದೀಪ್ ಶೆಟ್ಟಿ ಮಾಣಿ, ಸುಧೀರ್ ಶೆಟ್ಟಿ ನೇಸರ-ಕಂಪ, ಉದ್ಯಮಿ ಪ್ರವೀಣ್ ಶೆಟ್ಟಿ ಆಳಕೆಮಜಲು ಬೆಂಗಳೂರು, ನ್ಯಾಯವಾದಿಗಳಾದ ಕೃಷ್ಣಪ್ರಸಾದ್ ರೈ, ರಾಕೇಶ್ ಮಸ್ಕರೇನ್ಹಸ್, ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ಮಾನಕ ಜ್ಯುವೆಲ್ಸ್‌ನ ಸಿದ್ಧನಾಥ ಎಸ್.ಕೆ., ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ಇಲಿಯಾಸ್ ಮುಕ್ವೆ, ಪ್ರೇಮನಾಥ್ ಆಚಾರ್ಯ ಬೆಂಗಳೂರು, ಪುತ್ತೂರು ಯುವ ಕಾಂಗ್ರೆಸ್‌ನ ಪ್ರಸಾದ್ ಪಾಣಾಜೆ, ಬಿ.ಕೆ ಬಿಲ್ಡ್ ಮರ್‍ಟ್ನ ಪುತ್ತು ಹಾಜಿ ಬಾಯಾರು, ಜೆ.ಕೆ ಕನ್ಸ್ಟ್ರಕ್ಷನ್‌ನ ಜಯಕುಮಾರ್ ನಾಯರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಆಲಿ, ಉದ್ಯಮಿಗಳಾದ ಉಮೇಶ್ ನಾಡಾಜೆ ಮಂಗಳೂರು, ರಾಮ್‌ಪ್ರಸಾದ್ ಬೆಂಗಳೂರು, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ದೇವೇಂದ್ರ ಹೆಗ್ಡೆ ಬೆಂಗಳೂರು, ಶಶಿಧರ್ ಶೆಟ್ಟಿ ಮುಂಬಯಿ, ಸತೀಶ್ ರೈ ಮಿಶನ್‌ಮೂಲೆ, ಶಿವರಾಮ ಆಳ್ವ ಪುತ್ತೂರು, ಸಂತೋಷ್ ಕುಮಾರ್ ನಳೀಲು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ಯು.ಆರ್ ಪ್ರಾಪರ್ಟಿಸ್‌ನ ಉಜ್ವಲ್ ಪ್ರಭು, ಪದ್ಮಶ್ರೀ ಗ್ರೂಪ್ಸ್ನ ಸೀತಾರಾಮ ರೈ, ತಹಶೀಲ್ದಾರ್ ಅಜಿತ್ ಶೆಟ್ಟಿ ಬೆಂಗಳೂರು, ಜನ ಸಮೃದ್ಧಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಯಂ.ರಾಮು, ನ್ಯಾಯವಾದಿ ದೀನಬಂಧು ರೈ ಬೆಂಗಳೂರು, ದ.ಕ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಆರ್‌ಜಿಯುಎಚ್‌ಎಸ್ ಸಿಂಡಿಕೇಟ್ ಸದಸ್ಯ ಡಾ.ಯು.ಟಿ ಇಫ್ತಿಕಾರ್ ಆಲಿ, ಸೆನೆಟ್ ಸದಸ್ಯ ಡಾ|ಶರಣ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಬಂಟ್ವಾಳ ಮಂಡಲದ ಉಪಾಧ್ಯಕ್ಷ ಶ್ರೀಶಾಂತ್ ಶೆಟ್ಟಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಗೌರವ ಉಪಸ್ಥಿತಿಯಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಬಡಗನ್ನೂರು, ಮಂಗಳೂರು ಮ.ನ.ಪಾ. ವಿರೋಧ ಪಕ್ಷದ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ, ಎಸಿಎಫ್ ಕಾರ್ಯಪ್ಪ, ಎಸಿಎಫ್ ಪುತ್ತೂರು ಸುಬ್ಬಯ್ಯ ನಾಯ್ಕ, ಎಸಿಎಫ್ ಮಂಗಳೂರು ಶ್ರೀಧರ್, ಪುತ್ತೂರು ಆರ್‌ಎಫ್‌ಒ ಕಿರಣ್, ಸುಳ್ಯ ಆರ್‌ಎಫ್‌ಒ ಮಂಜುನಾಥ, ಬಂಟ್ವಾಳ ಆರ್‌ಎಫ್‌ಒ ಪ್ರಫುಲ್ ಶೆಟ್ಟಿ, ಪಂಜ ಆರ್‌ಎಫ್‌ಒ ಗಿರೀಶ್, ಸುಬ್ರಹ್ಮಣ್ಯ ಆರ್‌ಎಫ್‌ಒ ವಿಮಲ್ ಬಾಬು, ಮಾಜಿ ಪುರಸಭಾ ಸದಸ್ಯ ಸತೀಶ್ ನ್ಯಾಕ್ ಪರ್ಲಡ್ಕ, ಮೈಸೂರು ಶುಭಂ ಕ್ಯಾಟರಿಂಗ್‌ನ ಸುಜಿತ್ ಶೆಟ್ಟಿ, ಉದ್ಯಮಿ ಸಹಜ್ ರೈ ಬಳಜ್ಜ, ಮಂಗಳೂರು ಇನ್ಫೋಸಿಸ್‌ನ ಡೆಲಿವರಿ ಮ್ಯಾನೇಜರ್ ರಂಗನಾಥ್ ಕಾರಂತ್, ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಮಣಿಕಂಠ ಗ್ಯಾಸ್ ಡಿಸ್ಟ್ರಿಬ್ಯೂಟರ್‍ಸ್‌ನ ಅರುಣ್ ಕುಮಾರ್ ರೈ ಆನಾಜೆ, ಪಡೀಲು ವಿಘ್ನೇಶ್ವರ ಸುಧೀರ್ ಶೆಟ್ಟಿ, ಯುಎಇ ರುಚಿ ಕೆಟರರ್‍ಸ್ ಆಡಳಿತ ನಿರ್ದೇಶಕ ಸುಜಿತ್ ಶೆಟ್ಟಿ ಸವಣೂರು, ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಸಂದೀಪ್ ಶೆಟ್ಟಿ ಅರಿಯಡ್ಕ, ವಿನೋದ್ ಶೆಟ್ಟಿ ಅರಿಯಡ್ಕ, ಕಿಶೋರ್ ಶೆಟ್ಟಿ ಅರಿಯಡ್ಕ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ ಕಂಪ, ಕಾಮತ್ ಕ್ರಷರ್‌ನ ಆದಿತ್ಯ ಕಾಮತ್, ಫಾರೂಕ್ ಪೆರ್ನೆ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ತೌಸೀಫ್ ಯು.ಟಿ., ಶಬ್ಬೀರ್ ಕೆಂಪಿ, ಉಪ್ಪಿನಂಗಡಿ, ಆಸೀಫ್ ಉಪ್ಪಿನಂಗಡಿ, ಮೋನು ಪಿಲಿಗೂಡು, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಉದ್ಯಮಿಗಳಾದ ಮನ್ವಿಜ್ ಶೆಟ್ಟಿ ಬೆಂಗಳೂರು, ಅಶ್ವಿನ್ ರೈ ಪುತ್ತೂರು, ರಿತೇಶ್ ಶೆಟ್ಟಿ ಮಂಗಳೂರು, ಡ್ಯಾಶ್ ಮಾರ್ಕೆಟಿಂಗ್‌ನ ನಿಹಾಲ್ ಶೆಟ್ಟಿ, ಶ್ರೀಮತಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಸುಜಿತ್ ರೈ ಪಾಲ್ತಾಡು, ಶಮೂನ್ ಪರ್ಲಡ್ಕ, ಅಝಾರಾ ಟ್ರಾನ್ಸ್ಪರ್‍ಟ್ನ ಖಲಂದರ್, ಕೂರ್ನಡ್ಕ ಡ್ರೀಮ್ಸ್ ಹಸೈನಾರ್, ಸಂಪ್ಯ ಸೋಮನಾಥ ಎಂಟರ್‌ಪ್ರೈಸಸ್‌ನ ರವಿ ಕೊಟ್ಟಾರಿ, ಬೆಂಗಳೂರು ಈಸ್ಟರ್ನ್ ಗ್ರೂಪ್‌ನ ಖಲಂದರ್, ಅರ್ಷದ್ ದರ್ಬೆ, ಜಿಲ್ಲಾ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಗಿರೀಶ್ ಆಳ್ವ, ಉದ್ಯಮಿ ಗಿರೀಶ್ ಶೆಟ್ಟಿ, ಮಂಗಳೂರು ಪ್ರಗತಿ ಬಯೋಟೆಕ್‌ನ ಅಮೃತ್‌ಕಿರಣ್ ರೈ, ದರ್ಬೆ ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ, ಇಂಟಕ್ ಪುತ್ತೂರು ಅಧ್ಯಕ್ಷ ಜಯಪ್ರಕಾಶ್ ಬದಿನಾರು ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದರು.
ಸಿಝ್ಲರ್ ಗ್ರೂಪ್ಸ್ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿ, ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ, ಕಾರ್ಯದರ್ಶಿ ಲೋಹಿತ್ ಪಿ.ಜೆ, ಕೋಶಾಧಿಕಾರಿ ಕವನ್ ನಾಕ್ ದರ್ಬೆರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಮೆತ್ತಡ್ಕ ಯುವಕ ಮಂಡಲದ ಸದಸ್ಯರು, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇದರ ಸದಸ್ಯರು ಸಹಕರಿಸಿದರು.
ಕಬಕದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ..
ಕ್ರಿಕೆಟ್ ಅನ್ನುವುದು ಎಲ್ಲರಿಗೂ ಪ್ರಿಯವಾದ ಕ್ರಿಕೆಟ್. ಅಭಿವೃದ್ಧಿಯತ್ತ ಸಾಗುತ್ತಿರುವ ಪುತ್ತೂರಿನ ಕಬಕದಲ್ಲಿ ಸುಮಾರು ೨೧.೫೦ ಎಕ್ರೆ ಜಾಗದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂಗೆ ಈಗಾಗಲೇ ಜಾಗ ಮಂಜೂರಾಗಿದೆ. ಮುಂದಿನ ಒಂದು ವಾರದಲ್ಲಿ ಈ ಜಾಗವನ್ನು ಕೆ.ಎಸ್.ಸಿ.ಎಗೆ ಹಸ್ತಾಂತರವಾಗಲಿದೆ. ಸುಮಾರು ೨೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಅಂತರ್ರ್‍ಆಷ್ಟ್ರೀಯ ಸ್ಟೇಡಿಯಂ ಮುಂದಿನ ಮೂರು ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರಲ್ಲಿ ಒಂದು ಅಂತರರಾಷ್ಟ್ರೀಯ ಸ್ಟೇಡಿಯಂ ಮತ್ತೊಂದು ಇಲ್ಲಿನ ಯುವಕರಿಗೆ ಆಡಲು ಸ್ಟೇಡಿಯಂ ಅನ್ನು ನಿರ್ಮಿಸುವಂತೆ ಕೆ.ಎಸ್.ಸಿ.ಎಗೆ ಈಗಾಗಲೇ ಸೂಚಿಸಿದ್ದೇವೆ. ಜೊತೆಗೆ ರಿಕ್ರಿಯೇಶನ್ ಕ್ಲಬ್ ಕೂಡ ನಿರ್ಮಾಣವಾಗಲಿದೆ.
–ಅಶೋಕ್ ಕುಮಾರ್ ರೈ,
ಶಾಸಕರು, ಪುತ್ತೂರು
ಸೆಲೆಬ್ರಿಟಿಗಳ ಆಕರ್ಷಣೆ..
ಸೆಲೆಬ್ರಿಟಿಗಳಾದ ತುಳು ರಂಗಭೂಮಿ ಚಿತ್ರನಟ, ಕುಸಲ್ದರಸೆ ನವೀನ್ ಡಿ.ಪಡೀಲು, ಚಿತ್ರನಟ, ಗಾಯಕ ಗುರುಕಿರಣ್ ಹಾಗೂ ಅವರ ಸಹೋದರರು, ಚಿತ್ರನಟ ಹಾಗೂ ಕನ್ನಡ ಧಾರಾವಾಹಿ ನಟ ಸುರೇಶ್ ರೈ, ಅನಾರ್ಥ ಚಿತ್ರದ ನಟ ವಿಶಾಲ್, ನಟಿ ವಿಹಾನ್ನ ಗೌಡ, ನಿರ್ಮಾಪಕ ಶ್ರೀಧರ್, ಪ್ರಕಾಶ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಪಂದ್ಯಾಟದ ಮೆರುಗನ್ನು ಹೆಚ್ಚಿಸಿದರು.