ಗಣೇಶ್ ಟ್ರೇಡರ್ಸ್ ನ ನಾಲ್ಕು ದಶಕಗಳ ಗ್ರಾಹಕ ಸೇವೆ ಇನ್ನಷ್ಟು ‘ಕಲರ್ ಫುಲ್’ –ಜ.24ರಂದು(ನಾಳೆ) ಉದ್ಘಾಟನೆಗೊಳ್ಳಲಿದೆ ‘ಹಾಯ್ ಶಾ’ ಪೇಂಟ್ಸ್

0

ಪುತ್ತೂರು: ಕಳೆದ 44 ವರ್ಷಗಳಿಂದ ದರ್ಬೆಯಲ್ಲಿ ಕಾರ್ಯಾಚರಿಸುತ್ತಾ ಪುತ್ತೂರು ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ಮನೆ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಹಾಗೂ ಕೃಷಿಕರಿಗೆ ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಸ್ಯಾನಿಟರಿ ಸಾಮಾಗ್ರಿಗಳು ಮತ್ತು ಪೈಪ್ ಸಹಿತ ಅವಶ್ಯ ಸಾಮಾಗ್ರಿಗಳನ್ನು ಪೂರೈಸುತ್ತಾ ಸಂತೃಪ್ತ ಗ್ರಾಹಕರ ವಿಶ್ವಾಸರ್ಹ ಸಂಸ್ಥೆಯಾಗಿ ಬೆಳೆದು ನಿಂತಿರುವ ಗಣೇಶ್ ಟ್ರೇಡರ್ಸ್ ಮೂಲಕ ಇದೀಗ ತನ್ನ ಸೇವೆಯನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತಿದೆ.

‘ಹಾಯ್ ಶಾ ಪೈಂಟ್ಸ್’ಗಳ ಮಾರಾಟ ವಿಭಾಗ ಜ.24ರಂದು ಶುಭಾರಂಭಗೊಳ್ಳುತ್ತಿದ್ದು, ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಪೈಂಟ್ ಗಳು ಲಭ್ಯವಾಗಲಿದೆ.
ಕಳೆದ 40 ವರ್ಷಗಳಿಂದ ಪಿಡಿಲೈಟ್ ಸಂಸ್ಥೆಯ ಅಧಿಕೃತ ಡೀಲರ್ ಆಗಿರುವ ಗಣೇಶ್ ಟ್ರೇಡರ್ಸ್ ನಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅವರ ‘ಹಾಯ್ ಶಾ’ ಪೇಂಟಿಂಗ್ ವಿಭಾಗ ಕಾರ್ಯಾರಂಭ ಮಾಡುತ್ತಿರುವುದು ಇದರ ವಿಶೇಷವಾಗಿದೆ.
ಈ ನೂತನ ವಿಭಾಗವನ್ನು ಸುಧನ್ವ ಬಿ ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ. ಪಿಡಿಲೈಟ್ ನ ಮಂಗಳೂರು ಕ್ಲಸ್ಟರ್ ನ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿರುವ ಆದಿತ್ಯ ಪಿ ಆರ್, ಪಿಡಿಲೈಟ್ ಬೆಂಗಳೂರು ಕ್ಲಸ್ಟರ್ ನ ಪ್ರಾದೇಶಿಕ ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಆಗಿರುವ ಅಭಿಷೇಕ್ ನಿಗಮ್, ಎಸಿಸಿಇ (ಐ)ನ ಪುತ್ತೂರು ಚಾಪ್ಟರ್ ಅಧ್ಯಕ್ಷರಾಗಿರುವ ಎಂಜಿನಿಯರ್ ಪ್ರಮೋ್ ಕುಮಾರ್ ಮತ್ತು ಪೇಸ್ (ಆರ್)ನ ಅಧ್ಯಕ್ಷರಾಗಿರುವ ಎಂಜಿನಿಯರ್ ಸತ್ಯಗಣೇಶ್ ಎಂ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಮಾಲಕರಾಗಿರುವ ವಾಮನ್ ಪೈ, ನರಸಿಂಹ ಪೈ ಸಹಿತ ಗಣೇಶ್ ಟ್ರೇಡರ್ಸ್ ಸಂಸ್ಥೆಯ ಸರ್ವ ಸದಸ್ಯರು ಎಲ್ಲರನ್ನೂ ‌ಸ್ವಾಗತಿಸುತ್ತಿದ್ಧಾರೆ.

LEAVE A REPLY

Please enter your comment!
Please enter your name here