ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಮೂಡಣ ದಿಕ್ಕಿನಲ್ಲಿ ಸಭಾಭವನ ನಿರ್ಮಾಣಕ್ಕಾಗಿ ಮಾಡಿದ ಅದೃಷ್ಟ ಚೀಟಿ ಯೋಜನೆಯ ಫಲಿತಾಂಶದಲ್ಲಿ ಮೂವರು ಅದೃಷ್ಟಶಾಲಿಗಳು ದ್ವಿಚಕ್ರ ವಾಹನ ವಿಜೇತರಾಗಿದ್ದಾರೆ.
ಮುಂಡೂರು ಗ್ರಾ.ಪಂ ಸಿಬ್ಬಂದಿ ಸತೀಶ್ ಹಿಂದಾರು ಅವರು ಪ್ರಥಮ ಬಹುಮಾನವಾದ ಬಜಾಜ್ ಪಲ್ಸರ್ NS 200 ಬೈಕ್(ಕೂಪನ್ ನಂಬರ್ 126) ವಿಜೇತರಾಗಿದ್ದಾರೆ. ಇವರಿಗೆ ರಸಿಕ ಶಿವನಾಥ ರೈ ಮೇಗಿನಗುತ್ತು ಅವರು ಕೂಪನ್ ನೀಡಿದ್ದರು.
ಹಿತೇಶ್ ರೈ ಮಣಿಪಾಲ ಅವರು ದ್ವಿತೀಯ ಬಹುಮಾನವಾದ ಬಜಾಜ್ ಚೇತಕ್ ಇಲೆಕ್ಟ್ರಿಕ್ ಸ್ಕೂಟರ್ (ಕೂಪನ್ ನಂಬರ್ 407) ವಿಜೇತರಾಗಿದ್ದಾರೆ. ಇವರಿಗೆ ವಿನಯ ಕುಮಾರ್ ರೈ ಸರ್ವೆ ಅವರು ಕೂಪನ್ ನೀಡಿದ್ದರು.
ನರಿಮೊಗರು ಗ್ರಾ.ಪಂ ಉಪಾಧ್ಯಕ್ಷರಾದ ಉಮೇಶ್ ಇಂದಿರಾನಗರ ಅವರು ತೃತಿಯ ಬಹುಮಾನವಾದ ಬಜಾಜ್ CT 110 ಘಿ ಬೈಕ್(ಕೂಪನ್ ನಂಬರ್ 209) ವಿಜೇತರಾಗಿದ್ದಾರೆ. ಇವರಿಗೆ ಪುರಂದರ ರೈ ರೆಂಜಲಾಡಿ ಅವರು ಕೂಪನ್ ನೀಡಿದ್ದರು.
ಡ್ರಾ ವಿಜೇತರಿಗೆ ದೇವಸ್ಥಾನದ ವಠಾರದಲ್ಲಿ ದ್ವಿಚಕ್ರ ವಾಹನವನ್ನು ಹಸ್ತಾಂತರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಸರ್ವೆದೋಳಗುತ್ತು ಮತ್ತಿತರರು ಉಪಸ್ಥಿತರಿದ್ದರು.