ಅರಿಯಡ್ಕ: ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅರಿಯಡ್ಕ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಬೆಳಿಗ್ಗೆ ವಿಶೇಷ ಭಜನೆ ಸಂಕೀರ್ತನೆ, ಸಾರ್ವಜನಿಕರಿಗೂ ರಸಪ್ರಶ್ನೆ ಸ್ಪರ್ಧೆ, ಧಾರ್ಮಿಕ ಕಾರ್ಯಕ್ರಮ,ಕರ ಸೇವಕರಿಗೆ ಸನ್ಮಾನ, ಮಹಾಪೂಜೆ, ಅಕ್ಕಿ ವಿತರಣೆ, ನೂರಾರು ಮಂದಿಗೆ ಅನ್ನಸಂತರ್ಪಣೆ,ಎಲ್ ಇ ಡಿ ಮುಖಾಂತರ ಅಯೋಧ್ಯೆಯ ಕಾರ್ಯಕ್ರಮಗಳ ನೇರ ಪ್ರಸಾರ, ನಡೆಯಿತು.
ಸಭಾ ಕಾರ್ಯಕ್ರಮ
ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮಂತ್ರಾಕ್ಷತೆ ಸಮಿತಿ ಪ್ರಮುಖ್ ತಿಲಕ್ ರೈ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾದ ನಾರಾಯಣ ರೈ ಜಾರುತ್ತಾರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು.ಶ್ರೀರಾಮನ ಆದರ್ಶ ವಿಚಾರವಾಗಿ ಧಾರ್ಮಿಕ ಮುಖಂಡರ ಪೂರ್ಣ ಆತ್ಮಾರಾಮ ಈಶ್ವರ ಮಂಗಲ ಮತ್ತು ಅಯೋಧ್ಯೆಯ ಹೋರಾಟದ ಬಗ್ಗೆ ಯಶೋದಾ ಸುಳ್ಯ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ ಉಪಸ್ಥಿತರಿದ್ದರು.
ಸನ್ಮಾನ
ಕರಸೇವೆಯಲ್ಲಿ ಭಾಗವಹಿಸಿದ್ದ ವಸಂತ ಗೌಡ ಪಯಂದೂರು,ಶಂಕರ ಕುಲಾಲ್ ಬಳಕ್ಕ ಮತ್ತು ದಿ. ಲಕ್ಷ್ಮಿ ನಾರಾಯಣ ಶೆಟ್ಟಿ ಯುವರ ಪರವಾಗಿ ಅವರ ಸುಪುತ್ರ ಸೃಜನ್ ಶೆಟ್ಟಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಿತಿಯಸದಸ್ಯರು ಸಹಕರಿಸಿದರು.
ಸೃಷ್ಠಿ ಪ್ರಾರ್ಥಿಸಿ ,ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಸ್ವಾಗತಿಸಿ, ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರುತ್ತಾರು ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಕೋಟಿ ಚೆನ್ನಯ ಗೆಳೆಯರ ಬಳಗ ಪಾಪೆಮಜಲು ಇವರ ನೇತೃತ್ವದಲ್ಲಿ ದೀಪಾಲಂಕಾರ ಮಾಡಿ, ಸಿಡಿ ಮದ್ದು ಪ್ರದರ್ಶನ ನಡೆಸಲಾಯಿತು.