ರಾಮಕುಂಜ ಗ್ರಾ.ಪಂ.: ವಿಕಸಿತ ಭಾರತ ಸಂಕಲ್ಪ ಯಾತ್ರೆ

0

ರಾಮಕುಂಜ: ಕೇಂದ್ರ ಸರಕಾರದ ಯೋಜನೆಗಳ ಕುರಿತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಜ.19ರಂದು ರಾಮಕುಂಜ ಗ್ರಾ.ಪಂ.ನಲ್ಲಿ ನಡೆಯಿತು.
ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ಸಿದ್ದರಾಮಪ್ಪ ಚಲ್ಕಾಪುರಿ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ನ.15ರಂದು ಆರಂಭಗೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಜ.26ರ ತನಕ ದೇಶದೆಲ್ಲೆಡೆ ನಡೆಯಲಿದೆ. ಕೇಂದ್ರ ಸರಕಾರ ಜನರಿಗಾಗಿ ರೂಪಿಸಿರುವ 16 ಯೋಜನೆಗಳ ಕುರಿತು ಮಾಹಿತಿ ನೀಡಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ದೇಶದ ಪ್ರತಿಯೊಬ್ಬ ನಾಗರೀಕನೂ ಆರ್ಥಿಕವಾಗಿ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದರು.
ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಅವರು ಮಾತನಾಡಿ, ರೈತ ತಾನು ಬೆಳೆದ ಬೆಳೆಗೆ ಬೆಲೆ ನಿಗದಿಗೊಳಿಸಲು ಅರ್ಹನಾಗಿದ್ದಾನೆ. ಆದರೆ ನಮ್ಮ ದೇಶದಲ್ಲಿ ಮಧ್ಯವರ್ತಿಗಳು ಬೆಲೆ ನಿಗದಿಗೊಳಿಸುತ್ತಿದ್ದಾರೆ. ಇದು ತಪ್ಪಬೇಕು. ಸರಕಾರದ ಸೌಲಭ್ಯ ಪಡೆದುಕೊಳ್ಳದೇ ಸ್ವತಂತ್ರವಾಗಿ ಬೆಳೆಯುವ ಹಂತಕ್ಕೆ ಜನ ಬರಬೇಕು. ದೇಶದ ಎಲ್ಲಾ ನಾಗರಿಕರಿಗೆ ವೈದ್ಯಕೀಯ ಹಾಗೂ ಶಿಕ್ಷಣ ಉಚಿತವಾಗಿ ಸಿಗಬೇಕೆಂದು ಹೇಳಿದರು.


ಯಾತ್ರೆಯ ಉಸ್ತುವಾರಿಗಳಾದ ನಾಗರಾಜ್, ಲೀಡ್ ಬ್ಯಾಂಕ್ ಮೇನೇಜರ್ ಕವಿತಾ ಶೆಟ್ಟಿ, ಗೀತಾ ಅವರು ಮಾಹಿತಿ ನೀಡಿದರು. ಅಮೂಲ್ಯ ಗ್ಯಾಸ್ ಏಜೆನ್ಸಿಯ ಚಂದಪ್ಪ ಮೂಲ್ಯ, ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಕೃಷಿಕ ವೆಂಕಟೇಶ್ ಭಟ್ ಅವರು ಅನಿಸಿಕೆ ವ್ಯಕ್ತ ಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಉಮಾವತಿ, ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಎಸ್‌ಬಿಐ ಬ್ಯಾಂಕ್‌ನ ಕೆ.ರಾಮಯ್ಯ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಲಲಿತಾ ಜಿ.ಡಿ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ಕೃಷಿಕ ವೆಂಕಟೇಶ್ ಭಟ್ ಹೂಂತಿಲ, ಆರೋಗ್ಯವಂತ ಮಕ್ಕಳಾದ ರಾಮಕುಂಜ ಅಂಗನವಾಡಿ ಕೇಂದ್ರದ ಬಾಶಿಮ್ ಆತೂರು, ಕಾಜರೊಕ್ಕು ಅಂಗನವಾಡಿ ಕೇಂದ್ರದ ಲಾಸ್ಯ ಆನ, ಹಳೆನೆರೆಂಕಿ ಮೇಲೂರಿನ ಚಾರ್ವಿಕ ಪರಕ್ಕಾಲು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಜೀವನ್ ನೆಲ್ಯಾಡಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

LEAVE A REPLY

Please enter your comment!
Please enter your name here