ಫೆ.4:ಕುಂಬ್ರ ವಲಯ ಯುವ ಒಕ್ಕಲಿಗ ಕ್ರೀಡಾ ಹಬ್ಬ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಕುಂಬ್ರ ವಲಯ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಮಘ ಕುಂಬ್ರ ವಲಯ, ಒಕ್ಕಲಿಗ ಗೌಡ ಮಹಿಳಾ ಘಟಕ ಮತ್ತು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಇದರ ಸಹಭಾಗಿತ್ವದಲ್ಲಿ ವಲಯ ಮಟ್ಟದ ಯುವ ಕ್ರೀಡಾ ಹಬ್ಬ 2024 ಫೆ.4 ರಂದು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಜ.24ರಂದು ಕುಂಬ್ರ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ಶಿವರಾಮ ಗೌಡ ಇದ್ಯಪೆ, ಲೋಕೇಶ್ ಚಾಕೋಟೆ, ವಲಯ ಉಸ್ತುವಾರಿ ಸತೀಶ್ ಪಾಂಬಾರು, ಅಧ್ಯಕ್ಷ ಸತೀಶ್ ನೂಜಿ, ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ,ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಸಣಂಗಳ, ಮಾಧವ್, ಪರಮೇಶ್ವರ್, ಹರೀಶ್, ದಿನೇಶ್, ಕಾವ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here