ನಿಡ್ಪಳ್ಳಿ; ಗ್ರಾಮ ಪಂಚಾಯತ್ ಮಟ್ಟದ ಶಾಂತಾದುರ್ಗ ಸಂಜೀವಿನಿ ಒಕ್ಕೂಟ ನಿಡ್ಪಳ್ಳಿ ಇದರ 22-23ನೇ ಸಾಲಿನ ವಾರ್ಷಿಕ ಮಹಾಸಭೆಯು ಜ. 24 ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಒಕ್ಕೂಟದ ಅಧ್ಯಕ್ಷೆ ಚಿತ್ರ ಬೋರ್ಕರ್ ರವರು ಸಭಾಧ್ಯಕ್ಷತೆ ವಹಿಸಿದ್ದರು. ಎನ್ ಆರ್ ಎಲ್ ಎಮ್ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮಾತನಾಡಿ ಮಹಿಳೆಯರಿಗಾಗಿ ಸ್ವಉದ್ಯೋಗ ವಿವಿಧ ಇಲಾಖೆಗಳ ಮಾಹಿತಿ ಸರಕಾರದ ಸವಲತ್ತುಗಳು ನೇರವಾಗಿ ತಲುಪುವುದು ಹೇಗೆ ಮತ್ತು ಸಂಜೀವಿನಿ ಒಕ್ಕೂಟದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಂಜೀವಿನಿ ಒಂದು ಒಳ್ಳೆಯ ಕಾರ್ಯಕ್ರಮ ಎಂದು ಹೇಳುತ್ತಾ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಚಿತ್ರ ಬೋರ್ಕರ್ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕೂಡ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇದು ಒಂದು ಮಾದರಿಯಾಗಿದೆ. ಮಹಿಳೆಯರು ಎಲ್ಲರೂ ಮುಂದೆ ಬಂದು ಸ್ವಾವಲಂಬಿಯಾಗಿ ಬದುಕಲು ತುಂಬಾ ಅವಕಾಶಗಳು ಸಿಗುತ್ತವೆ ಎಂದರು.
ಸುಗುಣ, ಚಿತ್ರ, ಮೋಹಿನಿ, ಇವರು ಪ್ರಾರ್ಥಿಸಿ,ಎಂ.ಬಿ.ಕೆ ಭವ್ಯ ಬಿ ಸ್ವಾಗತಿಸಿ,ಎಲ್. ಸಿ. ಆರ್. ಪಿ ಭಾರತಿ ವಂದಿಸಿ, ಎಲ್ ಸಿ ಆರ್ ಪಿ ಯಾದ ಶಾಲಿನಿ.ಕೆ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಮೋಹಿನಿ ವರದಿ ಮಂಡಿಸಿದರು.ಉದ್ಯೋಗ ಸಖಿ ಆಶಾಲತಾ, ಬಿ. ಸಿ. ಸಖಿ ವೇದಾವತಿ, ಪಶು ಸಖಿ ತೇಜಸ್ವಿನಿ, ಎಫ್ ಎಲ್ ಸಿ ಆರ್ ಪಿ ಶ್ರೀಮತಿ, ಸ್ವಚ್ಛ ಸಿಬ್ಬಂದಿ ವರ್ಗ ಹಾಗೂ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಹಾಗೂ ಸಂಘದ ಸರ್ವ ಸದಸ್ಯರು ಸಹಕರಿಸಿದರು.