ಸುದಾನ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯಅಭ್ಯಾಗತರಾಗಿ ಆಗಮಿಸಿದ್ದ ದ.ಕ ಕರಾವಳಿ ನಿರ್ಣಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ ಧ್ವಜಾರೋಹಣ ಮಾಡಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ತಿಳಿದುಕೊಂಡು ಜವಾಬ್ದಾರಿಯುತವಾಗಿ ಬಾಳಬೇಕು. ಇದರಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾಮುಖ್ಯ ಶಿಕ್ಷಕಿ ಶೋಭಾನಾಗರಾಜ್‌, ಸಂವಿಧಾನದ ಮಾದರಿಯಲ್ಲಿ ಶಾಲಾ ಜೀವನದಲ್ಲೇ ಶಿಸ್ತುಬದ್ಧತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಶಕ್ತರಾಗಿ ಬಾಳುವ ಮೂಲಕ ದೇಶಸೇವೆಯನ್ನು ಮಾಡಬೇಕು ಎಂದು ಕರೆ ನೀಡಿದರು. ಸುದಾನ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ರೊ.ಆಸ್ಕರ್‌ ಆನಂದ್‌ ಶುಭಾಶಂಸನೆಗೈದರು. ಉಪ ಮುಖ್ಯ ಶಿಕ್ಷಕಿ ಲವೀನಾ ಹನ್ಸ್, ಜಾಗೃತಿ ಸೋಷಿಯಲ್‌ ಕ್ಲಬ್‌ನ ಸಂಯೋಜಕಿ ನಿಶ್ಮಿತಾ, ಶಾಲಾ ವಿದ್ಯಾರ್ಥಿ ನಾಯಕ ವಿಶಾಲ್, ಉಪನಾಯಕಿ ಜಿಯಾ ಸ್ವೀಡಲ್ ಲಸ್ರಾಡೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಲಿಮತ್ ಶಾದಿಯ (10ನೇ) ದಿನದ ಮಹತ್ವವನ್ನು ವಿವರಿಸಿದರು. ನಿಹಾರಿಕಾ ರೈ (10ನೇ) ಸ್ವಾಗತಿಸಿ, ಮಾ.ಅಮೃತ್ ಪಿ ಎಸ್ (10ನೇ) ವಂದಿಸಿದರು. ನಿಧಿ ಬೀಡಿಗೆ (10ನೇ), ಸ್ವಸ್ತಿ ಎನ್ ಶೆಟ್ಟಿ (10ನೇ) ಕಾರ್ಯಕ್ರಮ ನಿರೂಪಣೆ ಮಾಡಿದರು. ಸಹಶಿಕ್ಷಕಿ ಆಶಾಲತಾ, ಅಶ್ವಿನಿ ಸಹಕರಿಸಿದರು. ಈ ಕಾರ್ಯಕ್ರಮವನ್ನು ಶಾಲೆಯ ಸೋಷಿಯಲ್‌ ಕ್ಲಬ್‌ ಜಾಗೃತಿ ಆಯೋಜಿಸಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here