ಸುದಾನ ಶಾಲೆಯ ವಿಜ್ಞಾನ ಯೋಜನೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಕಲಬುರಗಿಯ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯಲ್ಲಿ ನಡೆದ 31ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪುತ್ತೂರಿನ ಸುದಾನ ವಸತಿಯುತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಖದೀಜತ್ ಅಫ್ನಾ, ಅಝಾ ಫಾತಿಮ, ಸೀನಿಯರ್ ಅರ್ಬನ್ ವಿಭಾಗದಲ್ಲಿ ಪ್ರಸ್ತುತಪಡಿಸಿದ ರಿಸೈಕ್ಲಿಂಗ್ ವೇಸ್ಟ್ ವಾಟರ್ ಫ್ರಮ್ ಆಟೋಮೊಬೈಲ್ ಸರ್ವಿಸ್ ಸ್ಟೇಷನ್ ಯೋಜನೆಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಜೂನಿಯರ್ ಅರ್ಬನ್ ವಿಭಾಗದಲ್ಲಿ 6ನೇ ತರಗತಿಯ ವಿದ್ಯಾರ್ಥಿನಿಯರಾದ ಸೃಷ್ಟಿ ಎನ್ ವಿ ಮತ್ತು ಶಮಿತ ಎಂ ಪ್ರಸ್ತುತಪಡಿಸಿದ ಸ್ಮಾರ್ಟ್ ಎಲ್.ಪಿ.ಜಿ ಸ್ಟೌ ಎಂಬ ಯೋಜನೆಗೆ ಅಭಿನಂದನಾ ಪತ್ರವನ್ನು ಪಡೆದಿದ್ದಾರೆ. ಇವರಿಗೆ ರಂಜಿತಾ ಎಂ.ಬಿ ರವರು ಮಾರ್ಗದರ್ಶನ ನೀಡಿದ್ದಾರೆ. ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಜೀವ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ ಎಂಬ ವಿಷಯದಲ್ಲಿ ನಡೆದ ಈ ಸಮಾವೇಶದಲ್ಲಿ ಒಟ್ಟು 4 ವಿಭಾಗಗಳಲ್ಲಿ ರಾಜ್ಯದ ವಿವಿಧ ಶಾಲೆಗಳ 300 ತಂಡಗಳು ಭಾಗವಹಿಸಿದ್ದವು. ಶಾಲಾ ವಿಜ್ಞಾನ ಶಿಕ್ಷಕಿ ನಿರ್ಮಲ ಡಿʼಸೋಜರವರು ವಿಜೇತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ವಿಜ್ಞಾನ ಚಟುವಟಿಕಾ ಸಂಯೋಜಕಿ ಪ್ರತಿಮಾ ಎನ್.ಜಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂದೆ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here