ಫೆ.18: ಮುಕ್ರಂಪಾಡಿ ಗೋಕುಲ ಬಡವಾವಣೆಯಲ್ಲಿ ದ್ವಾರಕೋತ್ಸವ -2024

0

ಪುತ್ತೂರು: ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ವತಿಯಿಂದ ದ್ವಾರಕೋತ್ಸವ-2024 ಎಂಬ ವಿಶಿಷ್ಟ ಕಾರ್ಯಕ್ರಮ ಫೆ.18ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಎ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಬೆಳಗ್ಗೆ 10 ಗಂಟೆಗೆ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶ್ರೀಪತಿ ಕಲ್ಲೂರಾಯ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥಡಾ. ಮನಮೋಹನ ಎಂ. ಗ್ರಂಥಾಲಯ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮತ್ತು ಯಕ್ಷಗಾನ ಪ್ರಸಾಧನ ಕಲಾವಿದ ಕೆ. ವೆಂಕಟೇಶ ಮಯ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ಮಂಜುನಾಥ ಭಟ್ಟ ಮತ್ತು ಹಿರಿಯ ಸಾಹಿತಿ ಗಣರಾಜ ಕುಂಬ್ಳೆ ಅವರು ಬರೆದ ಕೃತಿಗಳನ್ನು ಯಕ್ಷಗಾನ ಕಲಾ ಪೋಷಕರಾದ ಕೆ.ಪಿ. ರಾಜಗೋಪಾಲ್ ಬಿಡುಗಡೆ ಮಾಡಲಿದ್ದಾರೆ . ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸ ಚೇತನ್ ಮೊಗ್ರಾಲ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೀ ಬೋರ್ಡ್ ವಾದನ, ಅಪರಾಹ್ನ ನಂದಗೋಕುಲದ ಕಿರಿಯ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಲಿದೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6.30ರಿಂದ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ಪ್ರೀತಕಲಾ ಅವರಿಂದ “ಪಿಬರೇ ರಾಮರಸಂ’ ಎಂಬ ಹೆಸರಿನ ಶ್ರೀರಾಮಾವತಾರ ರೂಪಕ ನಡೆಯಲಿದೆ. 2023-24ನೇ ಶೈಕ್ಷಣಿಕ ಸಾಲಿನ ಎಳೆಯರ ರಾಮಾಯಣ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದವರು ಹೇಳಿದರು.

ದ್ವಾರಕಾ ಪ್ರತಿಷ್ಠಾನದಂದ ಹಲವು ಕಾರ್ಯಕ್ರಮ:
ದ್ವಾರಕಾ ಪ್ರತಿಷ್ಠಾನದ ವತಿಯಿಂದ ನಾನಾ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ರಾಮಾಯಣ ಪರೀಕ್ಷೆ ಆಯೋಜನೆ, ವಟುಗಳಿಗೆ ವೇದ ಪಾಠ ಶಿಬಿರ, ಬಡವರಿಗೆ ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಯಕ್ಷಗಾನ ತರಬೇತಿ, ಪುಸ್ತಕ ಪ್ರಕಾಶನ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳ ಸಾಲಿನಲ್ಲಿ ದ್ವಾರಕೋತ್ಸವ ಕೂಡ ಒಂದು ಎಂದು ಪ್ರತಿಷ್ಠಾನದ ಗೌರವ ಸಲಹೆಗಾರ ಗಣರಾಜ ಕುಂಬ್ಳೆ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಹೆಚ್.ಆರ್ ಮ್ಯಾನೇಜರ್ ದುರ್ಗಾಗಣೇಶ್ ಕೆ.ವಿ ಉಪಸ್ಥಿತರಿದ್ದರು.


ರೂ.29.99 ಲಕ್ಷಕ್ಕೆ ಮನೆ, ನಿವೇಶನ
ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು ಎಂಬ ಧ್ಯೇಯ ವಾಕ್ಯದೊಂದಿಗೆ 2005ರಲ್ಲಿ ಆರಂಭಗೊಂಡ ದ್ವಾರಕಾ ಕನ್ಸ್ಟ್ರಕ್ಷನ್ ಸಂಸ್ಥೆ ಕಳೆದ ವರ್ಷದಿಂದ ನಿಮ್ಮ ಹೂಡಿಕೆ ಮಣ್ಣಿನ ಮೇಲೆ ಭದ್ರ ಎಂಬ ಸ್ಲೋಗನ್‌ನಲ್ಲಿ ಸುಸಜ್ಜಿತ ಬಡವಾಣೆ ನಿರ್ಮಾಣಕ್ಕೆ ಕೈ ಹಾಕಿ ಇದೀಗ ಸಾವಿರಕ್ಕೂ ಮಿಕ್ಕಿ ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಈ ಭಾಗಿ ಅಗ್ಗದ ಬೆಲೆಗೆ ಅಂದರೆ ಕೇವಲ ರೂ. 29.99ಲಕ್ಷಕ್ಕೆ ಮನೆ ಮತ್ತು ನಿವೇಶನವನ್ನು ಮತ್ತು ರೂ. 9.99ಲಕ್ಷಕ್ಕೆ ಖಾಲಿ ನಿವೇಶನವನ್ನು ನೀಡುವ ಉದ್ದೇಶವನ್ನು ಹೊಂದಿ ಕಬಕ ಗ್ರಾಮದ ಶೇಷಾದ್ರಿ ಎಂಬ ಬಡಾವಣೆಯನ್ನು ನಿರ್ಮಿಸಿದೆ. ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್,ಪ್ರಸಿದ್ಧ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಕ್ಕಾಗಿ ಕೈಜೋಡಿಸಿದೆ. ದ್ವಾರಕೋತ್ಸವದಲ್ಲಿ ಸೈಟ್ ಅಥವಾ ಮನೆ ಖರೀದಿಸುವವರಿಗಾಗಿ ರೂ. 10ಸಾವಿರ ದ ಗಿಫ್ಟ್ ವೋಚರ್ ನೀಡುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಅಮೃತಕೃಷ್ಣ ಎನ್ ಅವರು ತಿಳಿಸಿದರು

LEAVE A REPLY

Please enter your comment!
Please enter your name here