ಪುತ್ತೂರು: ನಗರದ ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಇದರ ರಜತ ಮಹೋತ್ಸವದ ಪ್ರಯುಕ್ತ ಚರ್ಚ್ ನ ವಿವಿಧ ಅಭಿವೃದ್ಧಿ ಯೋಜನೆಗಳ ಸಹಾಯಾರ್ಥವಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ತುಳುನಾಡಿನ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಭೋಜರಾಜ್ ವಾಮಂಜೂರು ಪ್ರಮುಖ ಅಭಿನಯದ ತುಳು ಹಾಸ್ಯಮಯ ನಾಟಕ ‘ಪುದರ್ ದೀದಾಂಡ್’ ಫೆ.2 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಸಂಜೆ ಜರಗಲಿದೆ.
ಚಾ ಪರ್ಕ ಕಲಾವಿದರಿಂದ ಈ ವರ್ಷದ ವಿಭಿನ್ನ ಹಾಸ್ಯಮಯ ನಾಟಕ, ರಾಜ್ಯ ಪ್ರಶಸ್ತಿ ಪುರಸ್ಕೃತ, ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ ‘ಪುದರ್ ದೀದಾಂಡ್’ ನಾಟಕವನ್ನು ಶರ್ಮಿಳಾ ಕಾಪಿಕಾಡ್ ರವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಪ್ರಬುದ್ಧ ರಂಗ ಕಲಾವಿದರಾಗಿ ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಮಾಲೆಮಾರ್, ಪ್ರಕಾಶ್ ಧರ್ಮನಗರ, ಸಚಿನ್, ಸುಜಾತ ಶಕ್ತಿನಗರ, ಧೃತಿ ಸಾಯಿ, ಪ್ರಸನ್ನ ಬೋಳಾರ್, ಪವನ್ ಕುಮಾರ್ ರವರು ಅಭಿನಯಿಸಲಿದ್ದಾರೆ. ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ: 8277939367 ನಂಬರಿಗೆ ಸಂಪರ್ಕಿಸಬಹುದು ಎಂದು ಮರೀಲು ಚರ್ಚ್ ಪ್ರಕಟಣೆ ತಿಳಿಸಿದ್ದಾರೆ.