ಭಾರತ್ ಸ್ಕೌಟ್ಸ್-ಗೈಡ್ಸ್ ಪರೀಕ್ಷೆ: ರಾಮಕುಂಜ ಆ.ಮಾ. ಶಾಲೆಯ 17 ವಿದ್ಯಾರ್ಥಿಗಳು ಚತುರ್ಥ ಚರಣ/ಹೀರಕ್ ಗರಿ ಪರೀಕ್ಷೆಯಲ್ಲಿ ಉತ್ತೀರ್ಣ

0

ರಾಮಕುಂಜ: 2022-23ನೇ ಸಾಲಿನ ಭಾರತ್ ಸ್ಕೌಟ್ಸ್-ಗೈಡ್ಸ್‌ನ ಚತುರ್ಥ ಚರಣ/ಹೀರಕ್ ಗರಿ ಪರೀಕ್ಷೆಯಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 17 ಕಬ್ ಬುಲ್‌ಬುಲ್ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಬ್ ವಿಭಾಗದಲ್ಲಿ ಮೋಕ್ಷಿತ್ ವಿ.ಎನ್, ಸೃಜನ್ ಆರ್, ರಕ್ಷನ್ ಜಿ, ಸಾತ್ವಿಕ್ ಎ.ಎಸ್, ಹರ್ಷಿತ್, ಪ್ರಥಮ್ ಎಂ.ಕೆ, ಹವಿಷ್, ಹಾರ್ದಿಕ್ ಡಿ., ಹಾಗೂ ಬುಲ್‌ಬುಲ್ ವಿಭಾಗದಲ್ಲಿ ಎಂ.ಅದ್ವಿತಿ, ಜನ್ಯ ಕೆ, ಕೆ.ವಿ ಪೃಥ್ವಿ, ಧೃತಿ ಕೆ.ಎ., ಸಾನ್ವಿ, ಸಾನ್ವಿ ಯು.ಪಿ., ಸಾನ್ವಿ ಕೆ.ಎಸ್., ಛಾರ್ವಿ ಒ.ಆರ್., ಅನ್ವಿತಾ ಅವರು ತೇರ್ಗಡೆಯಾಗಿದ್ದಾರೆ. ಇವರಿಗೆ ಕಬ್ ಮಾಸ್ಟರ್ ಸುನಂದ ಕೆ.ಸಿ., ಕವಿತಾ ಬಿ ಹಾಗೂ ಫ್ಲಾಕ್ ಲೀಡರ್‌ಗಳಾದ ಸಂಧ್ಯಾ ಎ, ಕಾವ್ಯ ಇವರು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ, ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ಇವರ ಮಾರ್ಗದರ್ಶನದೊಂದಿಗೆ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here