ಪೆರ್ನೆ, ಬಿಳಿಯೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

0

ರಸ್ತೆಗಳು ಅಭಿವೃದ್ದಿಯಾದರೆ ಗ್ರಾಮಗಳು ಅಭಿವೃದ್ದಿಯಾಗುತ್ತದೆ: ಅಶೋಕ್ ರೈ

ಪುತ್ತೂರು: ಗ್ರಾಮೀಣ ರಸ್ತೆಗಳು ಅಭಿವೃದ್ದಿಯಾದರೆ ಮಾತ್ರ ಗ್ರಾಮಗಳು ಅಭಿವೃದ್ದಿಯಾಗಲು ಸಾಧ್ಯ, ಈ ನಿಟ್ಟಿನಲ್ಲಿ ಗ್ರಾಮದ ಕಟ್ಟಕಡೇಯ ರಸ್ತೆಯನ್ನೂ ಅಭಿವೃದ್ದಿ ಮಾಡುವ ಉದ್ದೇಶದಿಂದ ಹೆಚ್ಚು ಅನುದಾನವನ್ನು ನೀಡಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪೆರ್ನೆ ಹಗೂ ಬಿಳಿಯೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಪೆರ್ನೆ ಗ್ರಾಮದ ಕಡಂಬು ಕೋಡಿ ರಸ್ತೆ ಹಾಗೂ ಬೆಳಿಯೂರು ಗ್ರಾಮದ ಪೂಜಾರಿಪಾಲು ಕಲ್ಕುಡ ದೈವಸ್ಥಾನ ರಸ್ತೆಗೆ ಒಟ್ಟು 30 ಲಕ್ಷ ಕಾಮಗಾರಿಗೆ ಶಿಲಾನ್ಯಾಸ ನಡೆದಿದೆ. ಈ ರಸ್ತೆಗೆ ಇದುವರೆಗೂ ಅನುದಾನ ನೀಡದೇ ಇದ್ದು, ಗ್ರಾಮಸ್ಥರ ಬೇಡಿಕೆಯನ್ನು ಈ ಬಾರಿ ಈಡೇರಿಸಲಾಗಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ, ಗ್ರಾಮೀಣ ರಸ್ತೆಗಳು ದೇಹದ ನರಗಳಿದ್ದಂತೆ. ಗ್ರಾಮದ ಎಲ್ಲಾ ರಸ್ತೆಗಳು ಉತ್ತಮವಾಗಿದ್ದರೆ ಆ ಗ್ರಾಮ ಅಭಿವೃದ್ದಿಯಾಗುತ್ತದೆ. ಪೆರ್ನೆ ಗ್ರಾಮದಲ್ಲಿ ಅನೇಕ ರಸ್ತೆಗಳು ಕಾಂಕ್ರೀಟ್ ಮಾಡಲು ಬಾಕಿ ಇದ್ದು, ಶಾಸಕ ಅಶೋಕ್ ರೈ ತನ್ನ ಅವಧಿಯಲ್ಲಿ ಎಲ್ಲಾ ರಸ್ತೆಗಳಿಗೂ ಅನುದಾನ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಕೆಪಿಸಿಸಿ ಅಲ್ಪಸಂಖ್ಯಾತ ಕಾರ್ಯದರ್ಶಿ ನಝೀರ್ ಮಠ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ವಲಯಾಧ್ಯಕ್ಷ ಅಬ್ದುಲ್ಲ ಶಾಫಿ, ಗ್ರಾಪಂ ಸದಸ್ಯರುಗಳಾದ ತನಿಯಪ್ಪ ಪೂಜಾರಿ, ಸುನಿಲ್ ನಲ್ಸನ್ ಪಿಂಟೋ, ವನಿತಾ, ಉಮೇಶ್ ಬಾಕಿಮಾರು, ಸುಂದರ್ ಮಲ್ಲಡ್ಕ, ಪುಷ್ಕರ ಪೂಜಾರಿ, ಚನ್ನಕೇಶವ, ಅಶ್ರಫ್ ಮರ್ದೆಲು, ಹಕೀಂ ಕರ್ವೆಲು, ಚೇತನ್ ಕರ್ವೆಲು, ವಂದನಾ ಟೀಚರ್, ರಾಕೇಶ್ ಪೂಜಾರಿಪಾಲು, ಕಬೀರ್ ಕರ್ವೆಲು, ಸಲೀಂ ಕರ್ವೆಲು, ಬೂತ್ ಅಧ್ಯಕ್ಷರಾದ ಮಿತ್ರದಾಸ ರೈ, ಸುನಿಲ್, ಸುರೇಶ್ ರೈ, ಲೀಲೇಶ್, ಸುಮಿತ್ರ, ವಿದ್ಯಾ ಹರೀಶ್, ರಾಜೇಶ್, ಕುಸುಮಾ, ರಮಾನಂದ ಮೂಲ್ಯ, ಗಣೇಶ್, ಉದಯಕುಮಾರ್, ಕೃಷ್ಣಪ್ಪ ಪೂಜಾರಿ, ಸುರೇಶ್ ಆಚಾರ್ಯ, ಕುಶಾಲಪ್ಪ, ಮುಝಮ್ಮಿಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here