34 ನೆಕ್ಕಿಲಾಡಿ ಗ್ರಾ.ಪಂ. ಮಟ್ಟದ ಸಹಸ್ರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

0

ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು: ಸುಜಾತ ರೈ

ಉಪ್ಪಿನಂಗಡಿ: ಸಂಜೀವಿನಿಯಂತಹ ಸಂಘಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದು 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ತಿಳಿಸಿದರು.


34 ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ 34 ನೆಕ್ಕಿಲಾಡಿ ಗ್ರಾ.ಪಂ. ಮಟ್ಟದ ಸಹಸ್ರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯಿಂದ ಮಾತ್ರ ಶಕ್ತಿ ಬರಲು ಸಾಧ್ಯ. ಇಂತಹ ಸಂಘಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸ್ವ ಉದ್ಯೋಗ ಮಾಡಲು ಅವಕಾಶವಿದ್ದು, ಇದನ್ನು ಮಹಿಳೆಯರು ಸದ್ಭಳಕೆ ಮಾಡಿಕೊಂಡು ಯಶಸ್ವಿನ ಜೀವನ ನಡೆಸಬೇಕು. ಸಾಲ ಪಡೆಯುವುದು ಮಾತ್ರವಲ್ಲ ಅದನ್ನು ಸೂಕ್ತ ರೀತಿಯಲ್ಲಿ ಸದ್ವಿನಿಯೋಗಗೊಳಿಸಿ ಸಕಾಲದಲ್ಲಿ ಸಾಲ ಮರುಪಾವತಿಯತ್ತಲೂ ಗಮನ ನೀಡಬೇಕು ಎಂದರು.


ಎನ್‌ಆರ್‌ಎಲ್‌ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ. ಮಾತನಾಡಿ, ಸಾಮಾಜಿಕವಾಗಿ, ಆರ್ಥಿಕ ಹಾಗೂ ಜೀವನೋಪಾಯದ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಈ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಂಘಗಳ ಮೂಲಕವೇ ಸಾಲ- ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಅನೇಕ ಕಾರ್ಯಕ್ರಮಗಳನ್ನು, ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವ- ಉದ್ಯೋಗ ಮಾಡಲು ನೆರವಾಗುತ್ತದೆ. ಇಂತಹ ಸಂಘಗಳು ಮಹಿಳೆಯರಿಗೆ ಆರ್ಥಿಕ ಧೈರ್ಯವನ್ನು ತುಂಬುವುದರೊಂದಿಗೆ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತಿವೆ ಎಂದರು.


ವೇದಿಕೆಯಲ್ಲಿ ೩೪ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಬಂಗೇರ ಡಿ., ಸಹಸ್ರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೈಶಾಲಿ ಕುಂದರ್, ಕಾರ್ಯದರ್ಶಿ ಶ್ರೀಮತಿ ವಾಣಿಶ್ರೀ, ವಲಯ ಮೇಲ್ವಿಚಾರಕಿ ನಮಿತಾ ಕೆ., ಗ್ರಾ.ಪಂ. ಒಕ್ಕೂಟದ ಉಪಾಧ್ಯಕ್ಷೆ ಅನಿತಾ, ಜೊತೆ ಕಾರ್ಯದರ್ಶಿ ಸುಮಿತ್ರಾ, ಕೋಶಾಧಿಕಾರಿ ಅಸ್ಮಾ, ಸದಸ್ಯರಾದ ಆಶಾ, ಮೋಹಿನಿ, ಮಮತಾ, ಸ್ವಪ್ನಾ, ರತ್ನಾವತಿ, ಶ್ರೀಮತಿ ಗೀತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಾದ ಅನಿ ಮಿನೇಜಸ್, ಜಯಶೀಲ ಶೆಟ್ಟಿ, ಸ್ವಪ್ನ, ಕಮರ್‌ಬಾನು, ಗೀತಾ, ಸರೋಜಿನಿ, ರತಿ ಎನ್. ನಾಯ್ಕ, ಕಮಲಾಕ್ಷಿ, ರೇವತಿ, ಸುಜಾತ, ಚಂದ್ರಾವತಿ, ವಾರಿಜ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕೃಷಿ ಸಖಿ ಉಷಾ ಸ್ವಾಗತಿಸಿದರು. ಪಶು ಸಖಿ ದಿವ್ಯ ವಂದಿಸಿದರು. ಎಂಬಿಕೆ ಪಾವನಾ, ಎಲ್‌ಸಿಆರ್‌ಪಿ ಜಮೀಳಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here