ಆನಡ್ಕ ಶಾಲಾ ನಿವೃತ್ತ ಮುಖ್ಯಗುರು ಶುಭಲತಾರಿಗೆ ವಿದಾಯ ಕೂಟ, ಅಭಿನಂದನಾ ಸಮಾರಂಭ-ಕೊಡುಗೆ ಶಾಲಾರ್ಪಣೆ, ಕೃತಜ್ಞತಾ ಸ್ಮರಣೆ ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ, ಕೇಡರ್ ಮುಖ್ಯ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿದ್ದ, ಆನಡ್ಕ ಶಾಲಾ ನಿವೃತ್ತ ಮುಖ್ಯಗುರು ಶುಭಲತಾರವರ ವಿದಾಯ ಸಮಾರಂಭ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ನಿವೃತ್ತ ಮುಖ್ಯಗುರುಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮೆರವಣಿಗೆಯಲ್ಲಿ ಶಾಲೆಗೆ ಸ್ವಾಗತಿಸಿದರು. ಮುಖ್ಯ ಗುರುಗಳು ಶಾಲಾ ಚಿಣ್ಣರ ಪಾರ್ಕಿಗೆ ಕೊಡುಗೆಯಾಗಿ ನೀಡಿದ ‘crisscross climber‘ ಅನ್ನು ಮಕ್ಕಳು ಬಣ್ಣ ಬಣ್ಣದ ಬಲೂನ್ ಹಾರಿಸಿ ಸಂಭ್ರಮಿಸುವ ಮೂಲಕ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಶಾಲಾರ್ಪಣೆಗೊಳಿಸಲಾಯಿತು. ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಫೆಲ್ಸಿಟಾ ಡಿಕುನ್ಹಾ ಸ್ವಾಗತಿಸಿದರು.


ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಪಂಜಳ, ಉಪಾಧ್ಯಕ್ಷ ಉಮೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಎಮ್. ದಿನೇಶ ಗೌಡ, ತಾರನಾಥ, ನಿಕಟಪೂರ್ವ ಉಪಾಧ್ಯಕ್ಷ ಸುಧಾಕರ ಕುಲಾಲ್, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್, ದೈಹಿಕ ಶಿಕ್ಷಣ ಪರಿವೀಕ್ಷಣಾಽಕಾರಿ ಸುಂದರ ಗೌಡ, ,PDO ರವಿಚಂದ್ರ,ECO ಅಮೃತ ಕಲಾ, BIRT ತನುಜಾ, ದಕ್ಷಿಣ ಕನ್ನಡ ಜಿಲ್ಲಾ ಕೇಡರ್ ಮುಖ್ಯ ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಾರಾಯಣ, ಅಧ್ಯಕ್ಷ ನಿಂಗರಾಜು, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ಪೋಷಕ ವೃಂದ, ಊರಗಣ್ಯರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.


ಸಹ ಶಿಕ್ಷಕಿ ವಿಶಾಲಾಕ್ಷಿ ಅಭಿನಂದನಾ ಪತ್ರವನ್ನು ವಾಚಿಸಿದರು. ಸಹ ಶಿಕ್ಷಕಿ ಮಾಲತಿ ಗುರುಗಳ ಸಾಧನೆಯನ್ನು ಶಾಲೆಗೆ ನೀಡಿದ ಕೊಡುಗೆಗಳನ್ನು ಪ್ರಶಂಸಿಸಿದರು.
ಆ ಬಳಿಕ ಶಾಲಾ ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು ಮತ್ತು ಮುಖ್ಯ ಶಿಕ್ಷಕರ ಸಂಘ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ನಿವೃತ್ತರನ್ನು ಸನ್ಮಾನಿಸಲಾಯಿತು. ಗಣ್ಯರು ಅಽಕಾರಿಗಳು ನಿವೃತ್ತ ಶಿಕ್ಷಕರ ಸಾಧನೆಗಳನ್ನು ಸ್ಮರಿಸಿ ಶುಭ ಹಾರೈಸಿದರು.


ನಿವೃತ್ತ ಪ್ರೌಢಶಾಲಾ ಗುರುಗಳಾದ ಹಾಗೂ ಮಾರ್ಗದರ್ಶಕರಾದ ಜೋನ್ ಕುಟಿನ್ಹಾ ಪುತ್ತೂರು ಇವರು ಆಗಮಿಸಿ ಶುಭ ಹಾರೈಸಿ ತಮ್ಮ ಶಿಷ್ಯೆ ಶುಭಲತಾರನ್ನು ಆಶೀರ್ವದಿಸಿದರು. ಶುಭಲತಾರವರು ಗುರುವಂದನೆ ಸಲ್ಲಿಸಿದರು.


ಶುಭಲತಾ ಇವರ ಕುಟುಂಬದ ಸದಸ್ಯರು ಹಾಗೂ ಸಿನಿಮಾ ರಂಗದ ಸಹಕಲಾವಿದ ವಿಶ್ವನಾಥ ಅಸೈಗೋಳಿ ಉಪಸ್ಥಿತರಿದ್ದು ಕುಟುಂಬದ ಪರವಾಗಿ ಸನ್ಮಾನಿಸಿ ಶುಭ ಹಾರೈಸಿದರು.
ಪುತ್ತೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಪುತ್ತೂರು ಕುಲಾಲ ಬಾಂಧವರು, ಹಾರಾಡಿ ಶಾಲೆಯ ನಿವೃತ್ತ ಶಿಕ್ಷಕರ ಆತ್ಮೀಯ ಬಳಗ ಹಾಗೂ ಶಿಕ್ಷಕರು, ಪುತ್ತೂರಿನ ಅನೇಕ ಗಣ್ಯರು, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ನರಿಮೊಗರು ಕ್ಲಸ್ಟರ್‌ನ ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು, ನಿವೃತ್ತರ ಆತ್ಮೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.ಶಾಲಾ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.
ಆ ಬಳಿಕ ನಿವೃತ್ತರು ತಮ್ಮ 38 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಗೌರವಿಸಿ ಕೃತಜ್ಞತಾ ಸ್ಮರಣೆ ಮಾಡಿದರು. ಶಾಲೆಯ ಅಭಿವೃದ್ಧಿಯಲ್ಲಿ ಹೆಗಲು ಕೊಟ್ಟ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲಾ ಶಿಕ್ಷಕ ವೃಂದ ಮತ್ತು ಸಹಕಾರ ನೀಡಿದ ಎಲ್ಲರನ್ನು ಗೌರವಿಸಿ ಕೃತಜ್ಞತಾ ಸ್ಮರಣೆ ಮಾಡಿದರು.


ಬಳಿಕ ಸಹ ಶಿಕ್ಷಕಿ ಮಾಲತಿ ಚರಣ್ ರಚಿಸಿ ನಿರ್ದೇಶಿಸಿದ ಮುಖ್ಯ ಗುರುಗಳು ಮರಳಿ ಹೊರಟಿಹರು…ಎಂಬ ವಿದಾಯ ಗೀತೆಯನ್ನು ವಿದ್ಯಾರ್ಥಿಗಳು ಮನದುಂಬಿ ಹಾಡಿದಾಗ ನೆರೆದ ಅಭಿಮಾನಿಗಳ ಕಣ್ಣಾಲಿಗಳು ಹನಿ ಗೂಡಿದವು.ಗ್ರಾಮ ಪಂಚಾಯತ್ ಸದಸ್ಯ ಎಂ. ದಿನೇಶ ಗೌಡ ಗುರುಗಳ ಸೇವೆಯನ್ನು ಶ್ಲಾಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಶುಭ ಹಾರೈಸಿ ಕೃತಜ್ಞತೆ ಅರ್ಪಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಸುವರ್ಣ ಮಾತನಾಡಿ ಶುಭ ಹಾರೈಸಿದರು. ಶಾಲಾ ಜಿಪಿಟಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ವಿಶಾಲಾಕ್ಷಿ ವಂದಿಸಿದರು. ನೀತಾ ಸಹಕರಿಸಿದರು.





LEAVE A REPLY

Please enter your comment!
Please enter your name here