ರಾಮಕುಂಜ ಮಾಡ ಮಹಾಕಾಳಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ

0

ಆಲಂಕಾರು: ರಾಮಕುಂಜ ಗ್ರಾಮದ ಬದೆಂಜ, ಕುಂಡಡ್ಕ ಮಾಡ ಶ್ರೀ ಮಹಾಕಾಳಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕ ಮತ್ತು ನೇಮೋತ್ಸವ ಫೆ.10 ಮತ್ತು 11 ರಂದು ನಡೆಯಿತು.

ಫೆ.4 ರಂದು ಗೊನೆಮುಹೂರ್ತ ನಡೆದು ಫೆ.9 ರಂದು ಹಸಿರುವಾಣಿ ಸಮರ್ಪಣೆ ನಡೆದು ಫೆ.10 ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಪಂಚಗವ್ಯ ಪ್ರೋಕ್ಷಣೆ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಕಲಶಸ್ಥಾಪನೆ, ಅಧಿವಾಸ ಹೋಮಗಳು, ಕಲಾಶಾಭಿಷೇಕ, ನೈವೇದ್ಯ ಸಮರ್ಪಣೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಗೋಕುಲನಗರ, ಶ್ರೀ ದೇವಿ ಭಜನಾ ವರ್ನಡ್ಕರವರಿಂದ ಭಜನಾ ಕಾರ್ಯಕ್ರಮ ನಡೆದು ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ಶ್ರೀ ಮಹಾಕಾಳಿ, ಶ್ರೀ ರಕ್ತೇಶ್ವರಿ, ವರ್ಣಾರ ಪಂಜುರ್ಲಿ‌ ನೇಮೋತ್ಸವ ನಡೆದು ಫೆ .11 ರಂದು ಶ್ರೀ ಶಿರಾಡಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.

ಆಗಮಿಸಿದ ಭಕ್ತಾಧಿಗಳು ದೈವ ದೇವರುಗಳ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂಧರ್ಭದಲ್ಲಿ ಅಡಳಿತ ಸಮಿತಿ, ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗೌರವ ಸಲಹೆಗಾರರು, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here