ಕೆದಿಲ ಜಾಗದ ವಿಚಾರದಲ್ಲಿ ಹಲ್ಲೆ-ಇತ್ತಂಡದ ದೂರು ದಾಖಲು

0

ಪುತ್ತೂರು:ಜಾಗದ ವಿಚಾರದಲ್ಲಿ ಪರಸ್ಪರ ತಕರಾರು ಎತ್ತಿ ಹಲ್ಲೆ ನಡೆದ ಘಟನೆ ಕೆದಿಲ ಗ್ರಾಮದಲ್ಲಿ ಫೆ.೧೧ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇತ್ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಕೆದಿಲ ಗ್ರಾಮದ ಮಾಜಿ ಯೋಧ ಶಿವರಾಮ ಭಟ್ ಅವರ ಪತ್ನಿ ಗಾಯಾಳು ಸವಿತಾ ಭಟ್(೫೨ವ)ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ,ಇನ್ನೊಂದು ಕಡೆ ಕೆದಿಲ ಗ್ರಾಮದ ಹೈದರಾಲಿ ಎಂಬವರ ಪತ್ನಿ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಸವಿತಾ ಭಟ್ ಅವರು ಪೊಲೀಸರಿಗೆ ದೂರು ನೀಡಿ, ಱ ಪತಿ ಶಿವರಾಮ ಭಟ್ ಅವರ ಒಡೆತನದಲ್ಲಿರುವ ಜಮೀನಿನ ಪಕ್ಕದಲ್ಲಿ ಆರೋಪಿ ಹೈದರಾಲಿ ಎಂಬವರಿಗೆ ಸೇರಿದ ಜಾಗವಿದ್ದು, ಸದ್ರಿ ಜಮೀನುಗಳ ಗಡಿಗೆ ಸಂಬಂಧಿಸಿದಂತೆ ತಕರಾರು ಇದ್ದು ಫೆ.೧೧ರಂದು ಸಂಜೆ ಗಡಿ ತಕರಾರು ಇರುವ ಜಾಗದಲ್ಲಿ ಹೈದರಾಲಿ, ಹಬೀಬ್ ಮೊಹ್ಸಿನ್ ಹಾಗೂ ಇತರ ೧೫ ಜನರು ಬೇಲಿ ಹಾಕಲು ಬಂದಾಗ, ಪತಿ ಶಿವರಾಮ ಭಟ್ ಅವರು ಆಕ್ಷೇಪ ಮಾಡಿದ್ದರು.ಆ ವೇಳೆ ಹಬೀಬ್ ಮೊಹ್ಸಿನ್ ಎಂಬವರು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕಬ್ಬಿಣದ ಸುತ್ತಿಗೆಯಿಂದ ನನಗೆ ಹಲ್ಲೆ ನಡೆಸಿರುತ್ತಾರೆ.ಬಳಿಕ ಹೈದರಾಲಿ ಹಾಗೂ ಇತರರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆೞ ಎಂದು ಆರೋಪಿಸಿದ್ದಾರೆ. ಪೊಲೀಸರು ಕಲಂ ೩೨೪,೫೦೪,೫೦೬, ಋ/ಡ ೧೪೯ ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಱಪತಿ ಹೈದಾರಲಿಯವರು ಜಮೀನಿಗೆ ಬೇಲಿ ಹಾಕುತ್ತಿದ್ದಾಗ, ಸವಿತಾ ಭಟ್ ಹಾಗೂ ಶಿವರಾಮ್ ಭಟ್‌ರವರು ತಕರಾರು ತೆಗೆದು, ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ.ಈ ವೇಳೆ ಬೇಲಿಯ ಕಂಬದ ಕೆಲಸ ಮಾಡುತ್ತಿದ್ದ ಆಲಿ ಎಂಬವರಿಗೆ ತಾಗಿ ಗಾಯವಾಗಿತ್ತು.ಬಳಿಕ ಶಿವರಾಮ ಭಟ್ ಮತ್ತು ಅವರ ಪತ್ನಿ ಸವಿತಾ ಅವರು ತನಗೆ ಅವಾಚ್ಯವಾಗಿ ಬೈದು,ಹಲ್ಲೆ ನಡೆಸಿರುವುದಲ್ಲದೇ ಅನುಚಿತವಾಗಿ ವರ್ತಿಸಿರುತ್ತಾರೆ.ಬಳಿಕ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆೞ ಎಂದು ಹೈದರಾಲಿಯವರ ಪತ್ನಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.ಪೊಲೀಸರು ಕಲಂ ೩೨೪ಮ೩೫೪,೫೦೪ ಋ/ಡ ೩೪ ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಯಾಳುವನ್ನು ಭೇಟಿ ಮಾಡಿದ ಪುತ್ತಿಲ,ಸಾಜ: ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸವಿತಾ ಭಟ್ ಅವರಿಂದ ಘಟನೆ ಮಾಹಿತಿ ಪಡೆದುಕೊಂಡು, ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here