ರಾಜ್ಯ ಕಾಂಗ್ರೆಸ್ ಸಮಾವೇಶ ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜು-ನಗರ ಕಾಂಗ್ರೆಸ್ ಸಭೆಯಲ್ಲಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಹೇಳಿಕೆ

0

ಪುತ್ತೂರು:ಮಂಗಳೂರಿನಲ್ಲಿ ಫೆ.17ರಂದು ನಡೆಯುವ ಕಾಂಗ್ರೆಸ್ ರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಹೇಳಿದ್ದಾರೆ.

ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು.ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 10 ಸಾವಿರ ಜನ ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇಟ್ಟು ಕೊಳ್ಳಲಾಗಿದೆ.ಇದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಅಶೋಕ್ ಕುಮಾರ್ ರೈ ಮಾಡಿದ್ದಾರೆ.ನಗರ ಕಾಂಗ್ರೆಸ್ ವತಿಯಿಂದ ಸುಮಾರು 2 ಸಾವಿರದಷ್ಟು ಜನರನ್ನು  ಈ ಸಮಾವೇಶಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.ಅದಕ್ಕಾಗಿ ನಗರ ಕಾಂಗ್ರೆಸ್ ಪದಾಧಿಕಾರಿಗಳು, ನಗರ ಸಭಾ ಸದಸ್ಯರು, ಬೂತ್ ಅಧ್ಯಕ್ಷರುಗಳು ಶ್ರಮಿಸಬೇಕಾಗಿದೆ ಎಂದು ಹೇಳಿದ ಆಲಿಯವರು, ಸಮಾವೇಶಕ್ಕೆ ಹೋಗುವವರಿಗಾಗಿ ಶಾಸಕರು ಈಗಾಗಲೇ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಪ್ರತಿಯೊಂದು ಬೂತ್‌ಗಳಿಂದ ಕನಿಷ್ಠ 20 ಜನ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು.ಫೆ.17ರ ಬೆಳಿಗ್ಗೆ 10ಗಂಟೆಗೆ ದರ್ಬೆ ಬೈಪಾಸ್‌ನಲ್ಲಿ ಶಾಸಕರ ಚುನಾವಣಾ ಕಚೇರಿಯಲ್ಲಿ ಎಲ್ಲರೂ ಸೇರಿ ಅಲ್ಲಿಂದ ಮಂಗಳೂರುಗೆ ಹೊರಡುವುದು, ಮಂಗಳೂರಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ, ಬಳಿಕ ಸಮಾವೇಶದಲ್ಲಿ ಭಾಗವಹಿಸುವುದು ಎಂದು ಅವರು ತಿಳಿಸಿದರು.

ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಮಾತನಾಡಿ ಸಮಾವೇಶವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.ನಗರ ಸಭಾ ಸದಸ್ಯರಾದ ದಿನೇಶ್ ಕೆ ಶೇವಿರೆ, ಯೂಸುಫ್ ಡ್ರೀಮ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ರೋಷನ್ ರೈ ಬನ್ನೂರು, ರಾಮಚಂದ್ರ ನಾಯ್ಕ್ ಮಂಜಲ್ಪಡ್ಪು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್, ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಶರೀಫ್ ಬಲ್ನಾಡ್, ಪುತ್ತೂರು ಭೂನ್ಯಾಯ ಮಂಡಲಿ ಸದಸ್ಯ ಮಂಜುನಾಥ್ ಕೆಮ್ಮಾಯಿ, NSUI ನ ಎಡ್ವರ್ಡ್, ನಗರ ಕಾಂಗ್ರೆಸ್ ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಸಭೆಯಲ್ಲಿ ಭಾಗವಹಿಸಿದ್ದರು.ಕಲಾವಿದ ಕೃಷ್ಣಪ್ಪ ಸ್ವಾಗತಿಸಿ, ದಾಮೋದರ್ ಭಂಡಾರ್ಕರ್ ವಂದಿಸಿದರು

ಸಮಾವೇಶದ ಯಶಸ್ವಿಗೆ ಕೆಲವರಿಗೆ ಜವಾಬ್ದಾರಿ ನೀಡಲಾಯಿತು.ಬನ್ನೂರು-ಪಡ್ಡಾಯೂರು:ರೋಷನ್ ರೈ ಬನ್ನೂರು,ಲೋಕೇಶ್ ಪಡ್ಡಾಯೂರು,ಶ್ರೀಮತಿ ಶಾರದಾ ಅರಸ್,ಸಾಹಿರಾಬಾನು ಬನ್ನೂರು,ಮಹಾಬಲಪೂಜಾರಿ,ಜಾನ್ಸನ್ ಗಲ್ಪಾವೋ.ಬನ್ನೂರು:ರಶೀದ್ ಮುರ.ಮೊಟ್ಟೆತಡ್ಕ-ಕೂರ್ನಡ್ಕ: ನಗರಸಭೆ ಸದಸ್ಯರಾದ ಶ್ರೀಮತಿ ಶೈಲಾ ಪೈ,ಯೂಸುಫ್ ಡ್ರೀಮ್, ಅಲ್ಲದೆ ಸುರೇಶ ಪೂಜಾರಿ ಮೊಟ್ಟೆತಡ್ಕ,ರಫೀಕ್ ಮೊಟ್ಟೆತಡ,ಅಬ್ದುಲ್ಲ ಮೊಟ್ಟೆತ್ತಡ,ರೋನಿ ಮೊಂತೆರೊ ಮೊಟ್ಟೆತ್ತಡ್ಕ(ಬೂತ್ ಅಧ್ಯಕ್ಷ),ರವೀಂದ್ರ ರೈ ಮೊಟ್ಟೆತ್ತಡ್ಕ (ಬೂತ್ ಅಧ್ಯಕ್ಷ),ಮುಕೇಶ್ ಕೆಮ್ಮಿ೦ಜೆ, ಶ್ರೀಮತಿ ವಿಜಯಲಕ್ಷ್ಮೀ ಕೂರ್ನಡ್ಕ.ನೆಹರು ನಗರ-ಮಂಜಲ್ಪಡ್ಪು:ದಿನೇಶ್ ಕೆ ಶೇವಿರೆ(ಕೌನ್ಸಿಲರ್),ರಾಮಚಂದ್ರ ನಾಯ್ಕ್ ಮಂಜಲ್ಪಡ್ಪು,ವಿಕ್ಟರ್ ಪಾಯ್ಸ್, ಮಂಜಲ್ಪಡ್ಪು, ಕಲಾವಿದ ಕೃಷ್ಣಪ್ಪ ಕಲ್ಲೇಗ,ನವಾಜ್ ಕಾರ್ಜಾಲ್(ಬೂತ್ ಅಧ್ಯಕ್ಷ),ಜಯಂತ ಕಲ್ಲೇಗ,ಸುಜಿತ್ ನೆಹರುನಗರ,ಶೇಖರ ಶೇವಿರೆ, ನವೀನ್ ನಾಯ್ಕ್ ನೆಹರುನಗರ,ಹರಿಪ್ರಸಾದ್ ಶೇವಿರ.ಸಾಲ್ಮರ-ಕೃಷ್ಣನಗರ-ನೆಲ್ಲಿಕಟ್ಟೆ: ಮಂಜುನಾಥ್ ಕೆಮ್ಮಾಯಿ,ಇಸ್ಮಾಯಿಲ್ ಸಾಲ್ಮರ,ಶರತ್ ಕೇಪುಳು, ಅಲ್ಫೋನ್ಸ್, ದಾಮೋದರ್ ಭಂಡಾರ್ಕರ್,ದೇವಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬೆಳಿಯಪ್ಪ ಪೂಜಾರಿ ರೋಟರಿಪುರ,ಬಾಲಕೃಷ್ಣ ನಾಯ್ಕ್ ನೆಲ್ಲಿಕಟ್ಟೆ.

LEAVE A REPLY

Please enter your comment!
Please enter your name here