ಫೆ.17: ಪುಣಚ ಅಜ್ಜಿನಡ್ಕ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಗುಳಿಗ ಕೊರಗಜ್ಜ ದೈವದ ನೇಮೋತ್ಸವ

0

ಪುಣಚ: ಅಜ್ಜಿನಡ್ಕ ಸಂಕೇಶ-ಕೊಡಂಗೆ ಶ್ರೀ ಗುಳಿಗ, ಕೊರಗಜ್ಜ ಸಾನಿಧ್ಯದಲ್ಲಿ ಗುಳಿಗ, ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.17 ರಂದು ನಡೆಯಲಿದೆ.
ಫೆ.17ರಂದು ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆದು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೈವಗಳಿಗೆ ಎಣ್ಣೆ ಬೂಲ್ಯ ಕೊಡುವುದು, ಮಂತ್ರ ಗುಳಿಗ ದೈವದ ನೇಮೋತ್ಸವ ನಡೆದು ಅನ್ನ ಸಂತರ್ಪಣೆ ನಡೆಯಲಿದೆ.


ಬಳಿಕ ಶ್ರೀ ಕೊರಗತನಿಯ ದೈವದ ನೇಮೋತ್ಸವ ನಡೆಯಲಿದೆ. ಫೆ.18 ರಂದು ಮಧ್ಯಾಹ್ನ ಕೊರಗಜ್ಜ ದೈವಕ್ಕೆ ಸಾರ್ವಜನಿಕ ಅಗೇಲು ಸೇವೆ ನಡೆಯಲಿರುವುದು ಎಂದು ಸಮಿತಿಯ ಗೌರವಾಧ್ಯಕ್ಷ ಎಸ್. ಕೊರಗಪ್ಪ ಹಾಗೂ ಸಂಕೇಶ ಅಜಿಲ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here