ಶಾಲಾ ವತಿಯಿಂದ “ಭಾವಯಾನ – ಬದುಕಿನ ಕಲೆಯ ಪಯಣ” ವಿಶಿಷ್ಟ ಬೀಳ್ಕೊಡುಗೆ ಕಾರ್ಯಕ್ರಮ
ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 18 ಸ್ಕೌಟ್ಸ್- ಗೈಡ್ಸ್ ಹಾಗೂ 2 ಶಿಕ್ಷಕರು ಕರ್ನಾಟಕ ರಾಜ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಬಿರಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮ “ಭಾವಯಾನ – ಬದುಕಿನ ಕಲೆಯ ಪಯಣ” ಕಾರ್ಯಕ್ರಮ ಶಾಲೆಯ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಸಹಾಯಕಾರಿಯಾಗಿದೆ. ಇಂತಹ ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ಅಳವಡಿಸಿಕೊಂಡರೆ ಹೊಸತನವನ್ನು ಕಲಿಯುತ್ತಾರೆ. ಶಿಬಿರಾರ್ಥಿಗಳು ತಮ್ಮ ಭಾವನೆಗಳನ್ನಲ್ಲದೆ ಶಾಲೆಯ ಪ್ರತಿಯೊಂದು ಮಗುವಿನ ಭಾವನೆಯನ್ನು ತಮ್ಮೊಂದಿಗೆ ರಾಜ್ಯಮಟ್ಟಕ್ಕೆ ಹೊತ್ತೊಯ್ಯುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭರತ್ ರಾಜ್ ಕೆ.ರವರು ಮಾತನಾಡಿ ಬಾಲವಿಕಾಸ ಶಾಲೆಯು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಪುಣ್ಯವಂತರು. ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಗೈಡ್ಸ್ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಸಂಸ್ಥೆ ಬಾಲವಿಕಾಸ ಎಂಬುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ವೇದಿಕೆಯಲ್ಲಿ ಯು. ಶರಣಪ್ಪ ಹಾಗೂ ಬಾಲಕೃಷ್ಣ ಆಳ್ವ, ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಶೆಟ್ಟಿ ಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಸ್ಕೌಟ್ ವಿಭಾಗದಲ್ಲಿ ವರುಣ್, ವರ್ಷಿತ್ ಬಿ. ಎಂ, ಆಶ್ರಯ್ ಎಲ್, ಅಬ್ದುಲ್ ಮಾಹಿಸ್, ದಿಗಂತ್ ಎಸ್, ಸೌರಭ್ ಪ್ರಭು, ಮನ್ವಿತ್ ಕುಲಾಲ್, ದರ್ಶಿಲ್ ಭಾಗವಹಿಸಲಿದ್ದಾರೆ. ಗೈಡ್ಸ್ ವಿಭಾಗದಲ್ಲಿ ಸಾಕ್ಷಿ, ತನ್ವಿ ಎನ್. ಶೆಟ್ಟಿ, ಚಿನ್ಮಯಿ, ಗೌತಮಿ ಪಿ, ರಿಷಿಕಾ ರೈ, ಸಿಂಚನಾಶ್ರೀ ಶೆಟ್ಟಿ, ಸಿಂಚನ, ದಿಶಾ ಎಂ, ಸುಹಾನಿ ಎಸ್. ಶೆಟ್ಟಿ, ನಿವ್ಯಾ ರೈ ಭಾಗವಹಿಸಲಿದ್ದಾರೆ. ಶಿಕ್ಷಕರಾದ ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ. ಹಾಗೂ ಲೇಡಿ ಸ್ಕೌಟ್ ಮಾಸ್ಟರ್ ಸಪ್ನಾ ರವರನ್ನು ಬೀಳ್ಕೊಡಲಾಯಿತು. ಸಂಸ್ಥೆಯ ಆಡಳಿತ ಅಧಿಕಾರಿ ರವೀಂದ್ರ ಡಿ. ಸ್ವಾಗತಿಸಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಸೌಮ್ಯ ಹಾಗೂ ಅಶ್ವಿನಿ ಪಿ.ಆರ್ ಕಾರ್ಯಕ್ರಮ ನಿರೂಪಿಸಿದರು.