ಪುತ್ತೂರು: ಹೆಸರಾಂತ ನೆಕ್ಸಾ ಕಾರುಗಳ ಅಧಿಕೃತ ಮಾರಾಟ ಮತ್ತು ಸೇವಾ ಸಂಸ್ಥೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ನೆಕ್ಸಾ ಭಾರತ್ ಇದರ ವಿನೂತನ ಕಾರುಗಳ ಪ್ರದರ್ಶನ ಮಳಿಗೆ ಪುತ್ತೂರಿನಲ್ಲಿ ಶುಭಾರಂಭಗೊಂಡಿತು.
ಫೆ.21ರಂದು ತೆಂಕಿಲ ಟ್ರೂ ವ್ಯಾಲ್ಯೂ ಬಳಿಯಲ್ಲಿ ಪ್ರದರ್ಶನ ಮಳಿಗೆಯನ್ನು ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗರವರು ಉದ್ಘಾಟಿಸಿದರು. ಹೊಸ ತಳಿಯ ಫ್ರಾಂಕ್ಸ್ ಮತ್ತು ಬೆಲೆನೋ ಕಾರನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಭಾರತ್ ನೆಕ್ಸಾ ಸಂಸ್ಥೆಯು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಬೆಳೆದು ಬರುತ್ತಿದ್ದು, ಗ್ರಾಹಕರ ಮನೆ ಬಾಗಿಲಿಗೂ ಕೂಡ ತನ್ನ ಅಮೂಲ್ಯ ಸೇವೆ ಒದಗಿಸುವಲ್ಲೂ ಯಶಸ್ಸನ್ನು ಕಂಡಿದೆ. ಮುಂದೆಯೂ ಇದೇ ರೀತಿಯ ಸೇವೆ ಮೂಲಕ ಇನ್ನಷ್ಟೂ ಯಶಸ್ಸನ್ನು ಸಂಸ್ಥೆ ಕಾಣಲಿಯೆಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್‌ರವರು ಮಾತನಾಡಿ, ಆರಂಭದಲ್ಲಿ ಕಡಿಮೆ ಮೌಲ್ಯದ ಮಾರುತಿ 800 ಕಾರನ್ನು ಭಾರತದಲ್ಲಿ ಪರಿಚಯಿಸಿ, ಇದೀಗ ಸುಮಾರು 38 ಲಕ್ಷ ರೂ. ವರೆಗಿನ ಐಷಾರಾಮಿ ಕಾರುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತ್ ಸಂಸ್ಥೆಯ ಸಿಬ್ಬಂದಿಗಳ ಸೇವೆಯೂ ಕೂಡ ಅತ್ಯುತ್ತಮ ರೀತಿಯಲ್ಲಿ ಗ್ರಾಹಕರನ್ನು ಸೆಳೆಯಲು ಕಾರಣವಾದರೆ, ಕಾರುಗಳ ಅತ್ಯಂತ ಆಕರ್ಷಣೆಯೂ ಇನ್ನೊಂದು ಕಾರಣವೆಂದು ಹೇಳಿ ಶುಭಹಾರೈಸಿದರು.
ಉದ್ಯಮಿ ಜಯರಾಜ್ ನಾಥ್, ಕೃಷಿಕ ಶಿವರಾಮ ಪೈಲೂರು ಸಹಿತ ಹಲವು ಮಂದಿ ಕಾರು ಪ್ರಿಯರು ಮತ್ತು ಗ್ರಾಹಕರು ಇದ್ದರು. ನೆಕ್ಸಾ ಭಾರತ್ ಮ್ಯಾನೇಜರ್ ಸೂರಾಜ್ ಜೈನ್ ಸ್ವಾಗತಿಸಿದರು. ಸೇಲ್ಸ್ ಎಕ್ಸಿಕ್ಯೂಟಿವ್ ಪ್ರಕಾಶ್ ನಿರೂಪಿಸಿದರು. ಎಸ್.ಆರ್.ಎಂ. ಭಾಸ್ಕರ್ ರೆಂಜಾಳ, ಎಸ್.ಡಿ.ಎಂ.ಲೋನಾ ಅನಿತಾ ಡಿಸೋಜಾ, ಅಭಿಷೇಕ್, ಸುದರ್ಶನ್ ಸಹಿತ ಭಾರತ್ ಆಟೋ ಕಾರ್ಸ್, ಭಾರತ್ ಟ್ರೂ ವ್ಯಾಲ್ಯೂ ಇದರ ಸಿಬ್ಬಂದಿಗಳು ಹಾಜರಿದ್ದರು.
ಪುತ್ತೂರಿನಲ್ಲಿ ಸಣ್ಣದಾದ ರೀತಿಯಲ್ಲಿ ಔಟ್ ಲೆಟ್ ಆರಂಭಿಸಿದ್ದು, ಹೊಸ ಹೊಸ ತಳಿಯ ಕಾರುಗಳನ್ನು ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಇಲ್ಲಿ ಪ್ರದರ್ಶನಕ್ಕೆ ಇರಿಸಿದ್ದೇವೆ. ,ಗ್ರಾಹಕರೆಲ್ಲರೂ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
-ಸೂರಾಜ್ ಜೈನ್, ಮ್ಯಾನೇಜರ್, ನೆಕ್ಸಾ ಭಾರತ್. ಮೊ.9620583030