ಫೆ.24: ಪಾದೆಕರ್ಯ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯ

0

ಬಡಗನ್ನೂರುಃ  ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಪಾದೆಕರ್ಯ ಇದರ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ, ನಾಗ ಪೂಜೆ, ಅಶ್ವತ್ಥ ಪೂಜೆ, ಹರಿಸೇವೆ, ಮಹಾಪೂಜೆ ಮತ್ತು ರಕೇಶ್ವರಿ, ವರ್ಣರ ಪಂಜುರ್ಲಿ ಪರಿವಾರ  ದೈವಗಳಿಗೆ ತಂಬಿಲ ಸೇವೆ ಫೆ.24ರಂದು ನಡೆಯಲಿರುವುದು.

ಕಾರ್ಯಕ್ರಮಗಳು :-
ಫೆ. 24 ರಂದು  ಬೆಳಿಗ್ಗೆ ಗಂ 7ರಿಂದ  ಶ್ರೀ ಗಣಪತಿ ಹೋಮ, ನಾಗ ತಂಬಿಲ, ಅಶ್ವತ ಪೂ ಹರಿಸೇವೆ.ಮಧ್ಯಾಹ್ನ 12.30 ರಿಂದ  ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ  ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ ಗಂ 3ಕ್ಕೆ  ರಕ್ತಶ್ವರಿ, ವರ್ಣರ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ತಂಬಲ ಸೇವೆ ನಡೆಯಲಿದೆ.

ಆ ಪ್ರಯುಕ್ತ ಭಕ್ತಾದಿಗಳು, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ  ಪಾದೆಕರ್ಯ ಮನೆತನದ ಯಜಮಾನ ಕೆ.ವಿಷ್ಣು ಭಟ್ ಪಾದೆಕರ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮ;-
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ಗಂ.9ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂವ ಬೊಳುವಾರು ಪುತ್ತೂರು ಇವರಿಂದ” ಭೀಷ್ಮ ಪ್ರತಿಜ್ಞೆ” ಪೌರಾಣಿಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

LEAVE A REPLY

Please enter your comment!
Please enter your name here