ಕೆದಿಲ ಜಾಗದ ವಿಚಾರದಲ್ಲಿ ಹಲ್ಲೆ ಪ್ರಕರಣ :ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು : ಜಾಗದ ವಿಚಾರದಲ್ಲಿ ಪರಸ್ಪರ ತಕರಾರು ಎತ್ತಿ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣವೊಂದರಲ್ಲಿ ಆರೋಪಿಗಳೆನ್ನಲಾಗಿದ್ದ ಕೆದಿಲ ಗ್ರಾಮದ ಮಾಜಿ ಯೋಧ ಶಿವರಾಮ ಭಟ್ ಮತ್ತು ಸವಿತಾ ರವರಿಗೆ ಪುತ್ತೂರಿನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೆದಿಲ ಗ್ರಾಮದಲ್ಲಿ ಫೆಬ್ರವರಿ 11ರಂದು ಸಪ್ರಾಭಿ,ಅವರ ಪತಿ ಹೈದಾರಾಲಿ, ಕೆಲಸಗಾರರಾದ ಆಲಿ ಹೈದರ್, ನಿಜಮುದ್ದೀನ್ ಮತ್ತು ಹಬೀಬ್ ಮುಕ್ಸಿನ್ರೋ ಅವರೊಂದಿಗೆ ಜಮೀನಿಗೆ ಬೇಲಿ ಹಾಕುತ್ತಿದ್ದಾಗ ಶಿವರಾಮ್ ಭಟ್ ಮತ್ತು ಸವಿತಾ ರವರು ತಕರಾರು ತೆಗೆದು, ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ. ಈ ವೇಳೆ ಬೇಲಿಯ ಕಂಬದ ಕೆಲಸ ಮಾಡುತ್ತಿದ್ದ ಆಲಿ ಎಂಬವರಿಗೆ ತಾಗಿ ಗಾಯವಾಗಿತ್ತು. ಬಳಿಕ ಆರೋಪಿಗಳು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಲ್ಲದೇ,ಅನುಚಿತವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿರುತ್ತಾರೆಂದು ಅವರುಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆ ನಡೆಸಿ, ಭಾರತೀಯ ದಂಡ ಸಂಹಿತೆಯ ಕಲಂ 324,354,504 ಮತ್ತು 34 ರನ್ವಯ ಪ್ರಕರಣವನ್ನು ದಾಖಲಿಸಿದ್ದರು.

ಹೀಗಿರುವಾಗ, ಆರೋಪಿಗಳು ತಮ್ಮ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ ಶ್ರೀ ಮಹೇಶ್ ಕಜೆ ಅವರ ಮುಖಾಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ, , ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಧಾರಗಳ ಕೊರತೆ, ಅವರೊಳಗಿನ ಜಾಗದ ವಿಚಾರದ ಸಿವಿಲ್ ವ್ಯಾಜ್ಯಕ್ಕೆ ಕ್ರಿಮಿನಲ್ ಸ್ವರೂಪ ನೀಡಿರುವುದಾಗಿದೆ ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆಯಾದ ಶ್ರೀಮತಿ ಸರಿತಾ. ಡಿ ರವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

LEAVE A REPLY

Please enter your comment!
Please enter your name here