ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮ – ಸಮಾಜ ಸೇವಾ ರತ್ನ ಬಿರುದು ಪ್ರದಾನ

0

ಪುತ್ತೂರು: ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ನವತಿ ಸಂಭ್ರಮವು ಪುತ್ತೂರು ಕೊಂಬೆಟ್ಟು ಸುಂದರ ರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಫೆ.24 ರಂದು ನಡೆಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಮೂಡಬಿದ್ರೆ ಮತ್ತು ನವತಿ‌ ಸಂಭ್ರದಲ್ಲಿರುವ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ ಜೊತೆಯಾಗಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ನವತಿ ಸಂಭ್ರಮದ ಚಿಕ್ಕಪ್ಪ ನಾೖಕ್‌ರವರಿಗೆ ಸಮಾಜ ಸೇವಾರತ್ನ ಬಿರುದು:
ನವತಿ ಸಂಭ್ರಮದಲ್ಲಿರುವ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರಿಗೆ ನವತಿ ಸಂಭ್ರಮಾಚರಣಾ ಸಮಿತಿ ವತಿಯಿಂದ ಸಮಾಜ ಸೇವಾ ರತ್ನ ಬಿರುದು ಪ್ರದಾನದೊಂದಿಗೆ ಸನ್ಮಾನಿಸಲಾಯಿತು. ಕೆಂಗುಲಾಬಿಯ ಮಾಲೆ, ಸನ್ಮಾನ ಪತ್ರ, ಅಶ್ವರಥ, ಫಲಪುಷ್ಪ ನೀಡಿ ಗೌರವಿಸಲಾಯಿತು. ಅವರ ಸಹೋದರಿಯರು, ಮಗಳಂದಿರು, ಅಳಿಯಂದಿರು ವೇದಿಕೆಗೆ ಆಗಮಿಸಿ ಗೌರವಿಸಿದರು. ನವತಿ ಸಂಭ್ರಮಾಚರಣೆ ಸಮಿತಿ ಕೋಶಾಧಿಕಾರಿ ನೋಣಾಲು ಜೈರಾಜ್ ಭಂಡಾರಿ ಸನ್ಮಾನ ಪತ್ರ ವಾಚಿಸಿದರು.ಶಾಸಕ ಅಶೋಕ್ ಕುಮಾರ್ ರೈ, ಯಕ್ಷ ಪಟ್ಲ ಪೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ ,ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು,ಕಾರ್ಯದರ್ಶಿ ಜಗಜೀವನ್ ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಯಮಿ ಬೊಳ್ಳಾಡಿ ವೆಂಕಪ್ಪ ಗೌಡ, ಮುಗೇರು ಗೋಪಾಲ್ ರಾವ್, ರಾಜೀವ ರೈ ಕುತ್ಯಾಡಿ, ಡಾ.ಅಶೋಕ್ ಪಡಿವಾಳ್, ಕಾವು ಹೇಮನಾಥ ಶೆಟ್ಟಿ, ಜಯಪ್ರಕಾಶ್ ರೈ, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಗುರು ಶ್ರೀಧರ್ ರೈ ಹೊಸಮನೆ,ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಡಿ ಅತಿಥಿಗಳನ್ನು ಗೌರವಿಸಿದರು.ನವತಿ ಸಂಭ್ರಮಾಚರಣಾ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ವಿಶ್ರಾಂತ ಪ್ರೊ. ದತ್ತಾತ್ರೆಯ ರಾವ್ ಪ್ರಾರ್ಥಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ ಬಿಡುಗಡೆ:
ಅಜಾತ ಶತ್ರು ಚಿಕ್ಕಪ್ಪ ನಾೖಕ್‌ರವರ ಕುರಿತ ಜೀವನ ಚರಿತ್ರೆಯ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಚಿಕ್ಕಪ್ಪ ನಾೖಕ್‌ರವರ ವಿಶೇಷ ಲೇಖನ ಇರುವ ಪೂರವರಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಪುಸ್ತಕ ಬಿಡುಗಡೆ ಮಾಡಿದರು.

ಗಾನ ವೈಭವ:
ನವತಿ ಸಂಭ್ರಮದ ಆರಂಭದಲ್ಲಿ ಪಾವಂಜೆ ಮೇಳದ ಮುಖ್ಯ ಭಾಗವತರಾಗಿರುವ ಮತ್ತು ಯಕ್ಷದ್ರುವ ಪಟ್ಲ ಪೌಂಢೇಶನ್ ನ ಪಟ್ಲ ಸತೀಶ್ ಶೆಟ್ಟಿ ಬಳದಿಂದ ಯಕ್ಷಗಾನ ಗಾನ ವೈಭವ ನಡೆಯಿತು. ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ, ಪ್ರಶಾಂತ್ ರೈ, ಕು ಶ್ರೇಯ ಆಚಾರ್ಯ ಆಲಂಕಾರು ಮತ್ತು ಚೆಂಡೆ ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಹಾಗು ಚಕ್ರತಾಳ ರಾಜೇಂದ್ರಕೃಷ್ಣ ಸಹಕರಿಸಿದರು. ಪ್ತೊ. ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ನವತಿ ಸಂಭ್ರಮದ ಗೌರವಾಧ್ಯಕ್ಷ ಕೆ ಸೀತಾರಾಮ ರೈ, ಡಾ.ಸುರೇಶ್ ಪುತ್ತೂರಾಯ, ಶಶಿಕುಮಾರ್ ರೈ ಬಾಲ್ಯೊಟ್ಡು, ರಮೇಶ್ ರೈ ಡಿಂಬ್ರಿ, ರಾಕೇಶ್ ರೈ ಕೆಡೆಂಜಿ ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here