ಕೆಮ್ಮಾಯಿ ಭರತಪುರ ಶ್ರೀಪಂಚಮುಖಿ ಹನುಮಾನ್ ಮಂದಿರದಲ್ಲಿ ಪ್ರಾಣಪ್ರತಿಷ್ಠೆ – ಸಮಾಲೋಚನಾ ಸಭೆ

0

ಪುತ್ತೂರು: ಕೆಮ್ಮಾಯಿ ಭರತಪುರ ಶ್ರೀಪಂಚಮುಖಿ ಹನುಮಾನ್ ಮಂದಿರದಲ್ಲಿ ಶ್ರೀಪಂಚಮುಖಿ ಹನುಮಾನ್ ಮಂದಿರದ ಪ್ರಾಣಪ್ರತಿಷ್ಠೆಯ ಪ್ರಯುಕ್ತ ವಿವಿಧ ಸಮಿತಿಗಳ ರಚನೆ ಮಾಡುವ ಪ್ರಯುಕ್ತ ಸಮಾಲೋಚನಾ ಸಭೆ ಫೆ.25ರಂದು ಸಂಚೆ ಭರತ್‌ಪುರದಲ್ಲಿ ನಡೆಯಿತು.


ಸಮಾಲೋಚನಾ ಸಭೆಯಲ್ಲಿ ಏಪ್ರಿಲ್ 25, 26ರಂದು ನಡೆಯುವ ಪಂಚಮುಖಿ ಹನುಮಾನ್ ಮಂದಿರದ ಪ್ರಾಣ ಪ್ರತಿಷ್ಟೆಯ ಬಗ್ಗೆ ವಿಮರ್ಶೆ ನಡೆದು, ಉಡುಪಿ ಶಂಕರಪುರದ ಶ್ರೀ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ವಿಧಿವಿಧಾನವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಚಿದಾನಂದ ರೈ ಕೊಪ್ಪಳ, ಸುರೇಂದ್ರ ಪೂಜಾರಿ ಬಡವು, ಪ್ರವೀಣ್ ನಾಯ್ಕ್ (ಕೇಬಲ್), ಸುಧಾಕರ ನಾಯ್ಕ ಕೆಮ್ಮಾಯಿ, ಬೊಮ್ಮಯ್ಯ ಬಂಗೇರ ಮುಗ್ಗ, ನಾಗೇಶ್ (ಭಾರತ್), ಸಂತೋಷ್ ಶೆಟ್ಟಿ ಬಡವು, ಶ್ರೀಧರ ಮಡಿವಾಳ ಕೈಪಳ, ಅಶೋಕ್ ಭರತ್‌ಪುರ, ದಿಲೀಪ್ ಭರತ್‌ಪುರ, ಕಲಾವಿದ ಕೃಷ್ಣಪ್ಪ ನಗರ, ಮೋಹನ ಸಿಂಹವನ, ವಿಜಯ್ ಕುಮಾರ್ ಬಲ್ಲೇರಿಕಟ್ಟೆ, ಸುರೇಶ್ ಮಡಿವಾಳ, ರವಿ ಗೌಡ, ಸರಸ್ವತಿ ಬನ್ನೂರು, ಕಾವ್ಯ ಬನ್ನೂರು, ಪುಣ್ಯ ಪುರುಷರ ಕಟ್ಟೆ, ಕೃಪಾ, ಕವಿತಾ, ಚಿತ್ರ, ಚೈತ್ರ, ಚಂದ್ರಾವತಿ ನಾಯ್ಕ್, ಕುಸುಮಾವತಿ, ಶೋಭಾ, ಶ್ರೀಧರ ಮಡಿವಾಳ ಹಾಗೂ ಹನುಮಾನ್ ಆರಾಧಕರಾದ ಚೇತನ್ ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here