ಎಫ್‌.ಕೆ.ಸಿ.ಸಿ.ಐ. ವತಿಯಿಂದ ಬಿಸಿನೆಸ್ ಪ್ಲ್ಯಾನ್ ಸ್ಪರ್ಧೆ ‘ಮಂಥನ -2024’ ರ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಆಯೋಜನೆ ಮಾಡಿರುವ ಬಿಸಿನೆಸ್ ಪ್ಲ್ಯಾನ್ ಸ್ಪರ್ಧೆ ‘ಮಂಥನ -2024’ ರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಎಫ್‌.ಕೆ.ಸಿ.ಸಿ.ಐ.ನ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.


ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ ಡಿ ವೆಂಕಟೇಶ್, ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ ಮೆಂಟ್ ನ ನಿರ್ದೇಶಕರಾದ ಡಾ.ವಿಶಾಲ್ ಸಮರ್ಥ,

ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ರೆ.ಫಾ ವಿಲ್ಫ್ರೆಡ್ ಪಿ ಡಿಸೋಜಾರವರನ್ನು ಭೇಟಿ ಮಾಡಿದ ಮಂಥನ್ 2024 ರ ಅಧ್ಯಕ್ಷರಾದ ಕೀರ್ತನ್ ಕುಮಾರ್, ಎಫ್‌.ಕೆ.ಸಿ.ಸಿ.ಐ.ನ ಮಾಜಿ ಅಧ್ಯಕ್ಷರು, ಮಂಥನ್ 2024 ರ ಸಲಹೆಗಾರರಾದ ಡಾ. ಐ.ಎಸ್. ಪ್ರಸಾದ್, ಎಫ್‌.ಕೆ.ಸಿ.ಸಿ.ಐ. ಕೌಶಲ್ಯ ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಬಿ. ಎ. ಅಭಿಷೇಕ್ ರವರು ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಆ ಬಳಿಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕರ್ನಾಟಕದಾದ್ಯಂತ ಇರುವ ಸಂಸ್ಥೆಗಳಿಂದ ಪದವಿ, ಪದವಿ ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವ್ಯಾಪಾರ ಯೋಜನೆ ಸ್ಪರ್ಧೆ ಏರ್ಪಡಿಸಲಾಗಿದೆ.

ಇದೊಂದು ಪ್ರಾದೇಶಿಕ ಜಾಗೃತಿ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಈ ಸ್ಪರ್ಧೆ ಯಲ್ಲಿ ಭಾಗವಹಿಸಿ ಹತ್ತು ಲಕ್ಷ ರೂಪಾಯಿ ನಗದು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ ಎಂದು ಎಫ್‌.ಕೆ.ಸಿ.ಸಿ.ಐ.ಯ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here