ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತ ಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಮೊದಲನೇ ಡ್ರಾ ಅತ್ಯಂತ ಪಾರದರ್ಶಕವಾಗಿ ನಡೆದು ಐವರು ಅದೃಷ್ಟಶಾಲಿಗಳು ಕೇವಲ 1000ರೂಪಾಯಿ ಹಣ ಪಾವತಿ ಮಾಡಿ ಆಕ್ಟಿವಾ ಹೋಂಡಾ ತಮ್ಮದಾಗಿಸಿಕೊಂಡಿದ್ದಾರೆ. ಕೊಡಗಿನ ಕುಶಾಲನಗರದ ವಿಜಯಕುಮಾರ್, ವಿಟ್ಲ ಪಟ್ಟಣದ ವಿನಾಯಕ ಹೋಟೇಲ್ ಮಾಲೀಕರಾದ ನಾರಾಯಣ ನಾಯಕ, ಒಕ್ಕೆತ್ತೂರಿನ ಅಬ್ದುಲ್ ರಹಿಮಾನ್, ಕೇರಳ ಬಾಯಾರಿನ ಎ.ಕೆ ಸಿದ್ದೀಕ್ ಹಾಗೂ ಕಂಬಳಬೆಟ್ಟುವಿನ ಉಮ್ಮರ್ ಕುಂಞ ಆಕ್ಟಿವಾ ಹೋಂಡಾ ಗೆದ್ದ ಅದೃಷ್ಟಶಾಲಿಗಳು. ಇವರೊಂದಿಗೆ 20 ಮಂದಿ ಬಂಗಾರದ ಉಂಗುರಗಳನ್ನು ಪಡೆದುಕೊಂಡರು.
ಎರಡನೇ ತಿಂಗಳ ಡ್ರಾ ಮಾ.9ರಂದು ಸಾಯಂಕಾಲ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಬಿಲ್ಡಿಂಗ್ ನ ಮುಂಭಾಗದಲ್ಲಿ ನಡೆಯಲಿದೆ. ಈ ಬಾರಿಯ ವಿಶೇಷತೆ ಎಂದರೆ ಪ್ರತಿ ತಿಂಗಳು 20 ಸರ್ಪ್ರೈಸ್ ಗಿಫ್ಟ್ ಗಳಿದ್ದರೆ ಮಾ.9ರ ಡ್ರಾದಲ್ಲಿ 20 ಸರ್ಪ್ರೈಸ್ ಗಿಫ್ಟ್ ಗಳ ಜೊತೆ 20 ಬಂಗಾರದ ಉಂಗುರಗಳು ಲಭಿಸಲಿದೆ. ಜೊತೆಗೆ 4 ಮಂದಿಗೆ ತಲಾ 50 ಸಾವಿರ ರೂಪಾಯಿಗಳ ಬೆಲೆಬಾಳುವ ಬಂಗಾರ ಲಭಿಸಲಿದೆ. ಐದನೇ ತಿಂಗಳ ಬಂಪರ್ ಡ್ರಾದಲ್ಲಿ ಗ್ರಾಹಕರಿಗೆ ಲಭಿಸಲಿರುವ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲಾಯಿತು. ಸದಸ್ಯರಾಗಲು ಸೀಮಿತ ಅವಕಾಶವಷ್ಟೇ ಇದೆ. ಜೊತೆಗೆ ಸ್ಮಾರ್ಟ್ ಇಂಡಿಯಾ 0.1 ಸದಸ್ಯರಾಗುವ ಪ್ರತಿಯೊಬ್ಬ ಸದಸ್ಯರಿಗೂ 1 ಲಕ್ಷ ರೂಪಾಯಿ ಮೌಲ್ಯದ ಅಪಘಾತ ವಿಮೆಯನ್ನು ಸಂಸ್ಥೆಯು ಫ್ರೀಯಾಗಿ ಉಡುಗೊರೆಯಾಗಿ ನೀಡುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.