ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದಿಂದ ಪುತ್ತೂರು ಪೇಟೆಯಲ್ಲಿ ಅಪಾಯಕಾರಿ ಗುಂಡಿಗಳ ದುರಸ್ಥಿಗಾಗಿ ನಗರಸಭೆಗೆ ಮನವಿ

0

ಪುತ್ತೂರು: ಪುತ್ತೂರು ಪೇಟೆಯೊಳಗೆ ಹಲವು ಕಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಹೊಂಡಗಳನ್ನೊಳಗೊಂಡ ರಸ್ತೆಗಳಿವೆ. ಅದನ್ನು ದುರಸ್ಥಿಗೊಳಿಸುವಂತೆ ನಗರಸಭೆಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗ ಮನವಿ ಮಾಡಿದೆ.


ಮುಖ್ಯರಸ್ತೆ ಗಾಂಧಿಕಟ್ಟೆಯ ಬಳಿಯ ರಸ್ತೆ, ಅರುಣ ಕಲಾಮಂದಿರದ ಬಳಿಯ ರಸ್ತೆ, ಸಚಿನ್ ಟ್ರೇಡಿಂಗ್ ಹಾಗು ಡಾ. ಗೌರಿ ಪೈ ಅವರ ಮನೆಯ ಮುಭಾಗದಲ್ಲಿರುವ ರಸ್ತೆ, ತೆಂಕಿಲ ವಿವೇಕಾನಂದ ಶಾಲೆಗೆ ಹೋಗುವ ಇಳಿಜಾರಿನ ಕಾಂಕ್ರೀಟ್ ರಸ್ತೆ ಮಧ್ಯೆ ಜಲಸಂಪರ್ಕದ ಕೆಲಸದಿಂದ ರಸ್ತೆ ಅಪಾಯಕಾರಿಯಾಗಿದೆ. ಈ ಕುರಿತು ನಿಯೋಗ ಪೌರಾಯುಕ್ತರಿಗೆ ವಿವರಿಸಿದರು. ಪೌರಾಯುಕ್ತರು ಮನವಿಯನ್ನು ಸ್ವೀಕರಿಸಿ ಕೂಡಲೇ ಕೆಲಸ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ನಿಯೋಗದಲ್ಲಿದ್ದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ವಾಮನ ಪೈ, ಮಾಜಿ ಅಧ್ಯಕ್ಷ ಜಾನ್ ಕುಟೀನ್ಹ, ಕಾರ್ಯದರ್ಶಿಗಳಾದ ಮನೋಜ್.ಟಿವಿ ಮತ್ತು ಪಿ ಉಲ್ಲಾಸ್ ಪೈ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here