ಮಾ.1-7 ಶ್ರೀಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದ ಸಂಭ್ರಮ

0

ಪುತ್ತೂರು:ವಾಣಿಯನ್/ಗಾಣಿಗ ಸಮುದಾಯದ ಕುಲದೇವತೆ, ಕಾಸರಗೋಡು ಜಿಲ್ಲೆಯ ಕಣ್ಣೂರು ಸಮೀಪದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ನಂತರ ನಡೆಯುವ ಕಳಿಯಾಟ ಮಹೋತ್ಸವವು ಮಾ.1ರಂದು ಚಾಲನೆ ದೊರೆಯಲಿದೆ.


ಕ್ಷೇತ್ರವು ತನ್ನ ಶಾಂತಿಯುತ ಮತ್ತು ಕರುಣಾಮಯಿ ದೇವತೆಯಾದ ಶ್ರೀ ಪೆರ್ನೆ ಮುಚ್ಚಿಲೋಟ್ ಭಗವತಿಗೆ ಹೆಸರುವಾಸಿಯಾಗಿದೆ. ಭಕ್ತಾದಿಗಳ ಇಷ್ಟಾರ್ಥಗಳನ್ನು ಪೂರೈಸಲು ಹೆಸರುವಾಸಿಯಾಗಿರುವ ಈ ದೇವಾಲಯದ ಮಹತ್ವವು ವೈಯಕ್ತಿಕ ಅನುಭವದ ವಿಷಯವಾಗಿದೆ. ಶತಮಾನಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರವು ಕುಂಬಳೆ ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಕ್ಷೇತ್ರವು ನವೀಕರಣಗೊಂಡು 2020ರ ಮಾರ್ಚ್‌ನಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು. ಕ್ಷೇತ್ರವು ಬ್ರಹ್ಮಕಲಶೋತ್ಸವದ ಜೊತೆಗೆ ಕಲಿಯಾಟವನ್ನು ಆಯೋಜಿಸಲು ಯೋಜಿಸಿದ್ದರೂ, ಕೋವಿಡ್‌ನಿಂದಾಗಿ ವಿಳಂಬವಾಗಿತ್ತು. 2004 ರಲ್ಲಿ ನಡೆದ ಕಲಿಯಾಟಂ ಉತ್ಸವದ ನಂತರ 20 ವರ್ಷಗಳ ನಂತರ, ಪೆರ್ಣೆ ಕ್ಷೇತ್ರವು ಮತ್ತೊಮ್ಮೆ ಕಲಿಯಾಟ ಮಹೋತ್ಸವಕ್ಕೆ ಸಿದ್ದವಾಗಿದೆ.

ಕಲಿಯಾಟಂ (ಪೆರುಂ ಕಲಿಯಾಟಂ) ಪೆರ್ಣೆಯಲ್ಲಿನ ಪ್ರಮುಖ ಹಬ್ಬವಾಗಿದೆ. ಇದು ಏಳು ದಿನಗಳ ಆಚರಣೆ. ಪ್ರತಿ ಹನ್ನೆರಡರಿಂದ ಹದಿನೈದು ವರ್ಷಗಳಿಗೊಮ್ಮೆ ಇದನ್ನು ನಡೆಸಲಾಗುತ್ತದೆ. ದೇಗುಲದ ಮುಂಭಾಗದಲ್ಲಿ ತೆಯ್ಯಂ ಅನ್ನು ನಿರಂತರವಾಗಿ ಏಳು ದಿನಗಳ ಕಾಲ ದೇವಾಲಯದ ಪ್ರತಿಯೊಂದು ದೇವತೆಗಳಿಗೂ ನಡೆಸಲಾಗುತ್ತದೆ. ಪ್ರತಿ 12 ವರುಷಗಳಿಗೊಮ್ಮೆ ನಡೆಸಲ್ಪಡುವ ಕಳಿಯಾಟ ಮಹೋತ್ಸವದಲ್ಲಿ ಏಳು ದಿವಸವು ಪ್ರಧಾನ ದೈವಗಳೊಂದಿಗೆ ಭಗವತಿ ದೇವಿಯು ಆರಾಧಿಸಲ್ಪಡುತ್ತಾರೆ. ಏಳನೇ ದಿನದಲ್ಲಿ ಭಗವತಿ ದೇವಿಯ ಮಹಿಮೆ ಎಂಬಂತೆ ಶ್ರೀ ಕ್ಷೇತ್ರದ ಆಳವಾದ ಪ್ರವಿತ್ರ ಬಾವಿಯ (ಮಣಿ ಕಿನಾರೆ) ನೀರು ಉಕ್ಕೇರಿ ಬಂದು ಭಗವತಿ ಅಮ್ಮನವರ ಅಣಿಗೆ ಸ್ಪರ್ಶಿಸುದರೊಂದಿಗೆ ಸದಾ ತನ್ನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ಈ ಪವಿತ್ರ ಕ್ಷೇತ್ರದಲ್ಲಿ ಸೇರಿರುವ ಸರ್ವ ಭಕ್ತ ಮಹಾಶಯರಿಗೇ ಸಿರಿಮುಡಿ ಗಂಧ ಅರಶಿನ ಪ್ರಸಾದ ವಿತರಣೆ, ಭಕ್ತ ಮಹಾಶಯರೆಲ್ಲರಿಗೂ ಅಭಯದ ಆರ್ಶೀವಾದದೊಂದಿಗೆ ಶ್ರದ್ಧಾ ಭಕ್ತಿಯ ಕನಸು ಕಾತರದ ಶ್ರೀ ಭಗವತಿ ಅಮ್ಮನವರ ವೈಭವದ ಕಳಿಯಾಟ ಮಹೋತ್ಸವವು ಸಂಪನ್ನಗೊಳ್ಳುವುದು.

ಪ್ರಾರಂಭದ ದಿನವಾದ ಮಾ.1ರಂದು ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವರ ಸನ್ನಿಧಿಯಿಂದ ಭಂಡಾರ ಅಗಮನ, ಹೊರೆಕಾಣಿಕೆ ಮೆರವಣಿಗೆ, ಶ್ರೀ ಸನ್ನಿಧಿಯಲ್ಲಿ ಕೊಡಿ ಎಲೆ ಇಡುವುದು, ಅಚ್ಚನ್ಮಾರರ ದರ್ಶನ, ಉಗ್ರಾಣ ತುಂಬಿಸುವುದು, ಅಕ್ಷಯ ಪಾತ್ರೆ ಇಡುವುದು, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ಮಾ.2ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನ, ಕಣ್ಣಂಗಾಟ್ ಭಗವತಿ-ಪುಲ್ಲೂರ್‌ಕಾಳಿ ದೈವಗಳ ನರ್ತನ, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಸಂಜೆ ಕುತ್ಯಾಳ ತರವಾಡಿನಿಂದ ಬೀರ್ಣಾಳ್ವ ದೈವದ ಭಂಡಾರ ಆಗಮನ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ.

ಮಾ.3ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನವಾಗಿ ಅನಂತಪುರ ದೇವಸ್ಥಾನಕ್ಕೂ ಯಜಮಾನರ ಮನೆಗೂ ಭೇಟಿ ನೀಡುವುದು, ಕಣ್ಣಂಗಾಟ್ ಭಗವತಿ ದೈವದ ನರ್ತನ, ಮಧ್ಯಾಹ್ನ ಪುಲ್ಲೂರ್ ಕಾಳಿ ದೈವದ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ಬೀರ್ಣಾಳ್ವ ದೈವದ ನರ್ತನ, ಪ್ರಸಾದ ವಿತರಣೆ, ವಿಷ್ಣುಮೂರ್ತಿ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ ನೀಡುವುದು. ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ವೇಟಕ್ಕೊರುಮಗನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಮಾ.4ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ ನೀಡುವುದು, ಕಣ್ಣಂಗಾಟ್ ಭಗವತಿ ದೈವದ ನರ್ತನ, ಪುಲ್ಲೂರ್‌ಕಾಳಿ ದೈವದ ನರ್ತನ, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ವೇಟಕ್ಕೊರುಮಗನ್ ದೈವದ ನರ್ತನ, ಅಪರಾಹ್ನ ವಿಷ್ಣುಮೂರ್ತಿ ದೈವದ ನರ್ತನವಾಗಿ ಅನಂತಪುರ ದೇವಸ್ಥಾನ, ಯಜಮಾನರ ಮನೆಗೆ ಭೇಟಿ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಮೂವಾಳಂಕುಯಿ ಚಾಮುಂಡಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ.

ಮಾ.5ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್, ಕಣ್ಣಂಗಾಟ್ ಭಗವತಿ ಪುಲ್ಲೂರ್‌ಕಾಳಿ ದೈವಗಳ ನರ್ತನ, ಮಧ್ಯಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ವಿಷ್ಣುಮೂರ್ತಿ ದೈವದ ನರ್ತನ, ಪುಲ್ಲೂರ್ ಕಣ್ಣನ್ ದೈವದ ವೆಳ್ಳಾಟ, ಮೂವಾಳಂಕುಯಿ ಚಾಮುಂಡಿ ದೈವದ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ ನಡೆಯಲಿದೆ. ಮಾ.6ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್, ಕಣ್ಣಂಗಾಟ್ ಭಗವತಿ, ಪಡಿಞರ್ ಚಾಮುಂಡಿ ದೈವದ ನರ್ತನ, ಮಧ್ಯಾಹ್ನ ಅಡಿಚ್ಚುತ್ತಳಿ ಸ್ತೋತ್ರ, ಅಪರಾಹ್ನ ತಚ್ಚಿಲೋನ್ ದೈವದ ವೆಳ್ಳಾಟ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ಪುಲ್ಲೂರ್‌ಕಾಳಿ, ನರಂಬಿಲ್ ಭಗವತಿ ದೈವದ ಸ್ತೋತ್ರ, ಸಂಜೆ ತಚ್ಚಿಲೋನ್ ಮತ್ತು ನಾಯನಾರ್ ದೈವಗಳ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಗಣಪತಿ ಸ್ತೋತ್ರ, ಕೊಡಿ ಎಲೆ ಸ್ತೋತ್ರ, ದರ್ಶನದೊಂದಿಗೆ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿಸ್ಪರ್ಶ ನಡೆಯಲಿದೆ.

ಮಾ.7ರಂದು ಪ್ರಾತಃಕಾಲ ನರಂಬಿಲ್ ಭಗವತಿ ದೈವದ ನರ್ತನ, ಪೂರ್ವಾಹ್ನ ಪುಲ್ಲೂರ್ ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿ ಸೇವೆ, ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‌ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆಯೊಂದಿಗೆ ಕಳಿಯಾಟ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಮಾ.2 ಪುತ್ತೂರಿನಿಂದ ಹಸಿರು ಹೊರೆಕಾಣಿಕೆ
ಶ್ರೀಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವಕ್ಕೆ ಪುತ್ತೂರು ಹಾಗೂ ಕಡಬ ತಾಲೂಕಿನ ವಾಣಿಯನ್/ಗಾಣಿಗ ಸಮುದಾಯದ ಬಂಧುಗಳಿಂದ ಹಸಿರು ಹೊರೆಕಾಣಿಕೆಯು ಮಾ.2ರಂದು ಸಮರ್ಪಣೆಯಾಗಲಿದೆ. ಬೆಳಿಗ್ಗೆ 8.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಡುವ ಹೊರೆಕಾಣಿಕೆ ಮೆರವಣಿಯು ದರ್ಬೆ, ಸಂಟ್ಯಾರ್, ಪಾಣಾಜೆ, ಪೆರ್ಲ ಮಾರ್ಗವಾಗಿ ಕ್ಷೇತ್ರಕ್ಕೆ ಸಾಗಲಿದೆ ಎಂದು ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here