ಬೆಟ್ಟಂಪಾಡಿ: ಪುತ್ತಿಲ ಪರಿವಾರದಿಂದ ರಕ್ತದಾನ ಶಿಬಿರ – ಆಂಬ್ಯುಲೆನ್ಸ್ ಲೋಕಾರ್ಪಣೆ 

0

ನಿಡ್ಪಳ್ಳಿ: ಪುತ್ತಿಲ ಪರಿವಾರ ಇರ್ದೆ ಬೆಟ್ಟಂಪಾಡಿ ಪಾಣಾಜೆ ನಿಡ್ಪಳ್ಳಿ ಗ್ರಾಮ ಸಮಿತಿ ಹಾಗೂ ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಮತ್ತು ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಮಾ.3 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಪ್ರಸನ್ನ ಮಾರ್ತ ಕಾರ್ಯಕ್ರಮ ಉದ್ಘಾಟಿಸಿದರು.

ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಇದರ ವೈದ್ಯಾಧಿಕಾರಿ ಸೀತಾರಾಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ರೆಂಜ ಶ್ರೀದೇವಿ ಕ್ಲಿನಿಕ್ ನ ಡಾ.ಸತೀಶ್ ರಾವ್, ಬೆಟ್ಟಂಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಸುಜಿತ್ ಕಜೆ, ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಭಟ್ ಬೊಳ್ಳುಕಲ್ಲು, ನಿಡ್ಪಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕುಮಾರ ನರಸಿಂಹ ಬುಳೆನಡ್ಕ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಆಂಬ್ಯುಲೆನ್ಸ್ ಲೋಕಾರ್ಪಣೆ:
ಬಡ ಜನರ ಆರೋಗ್ಯ ರಕ್ಷಣೆಗೆ ಬೇಕಾಗಿ  ಪರಿವಾರದ ವತಿಯಿಂದ ಆಂಬ್ಯುಲೆನ್ಸ್ ಅರ್ಪಿಸಿದ್ದು ಅದನ್ನು ಡಾ.ಸತೀಶ್ ರಾವ್ ಮತ್ತು ಸೀತಾರಾಮ ಭಟ್ ರಿಬ್ಬನ್ ಕಟ್‌ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು. ಧರ್ಮ ರಕ್ಷಕ ಆರೋಗ್ಯ ರಕ್ಷಕನಾಗಿ ಅರುಣ್ ಕುಮಾರ್ ಪುತ್ತಿಲರವರು ಆಂಬ್ಯುಲೆನ್ಸ್ ಚಲಾಯಿಸಿ ಲೋಕಾರ್ಪಣೆಗೊಳಿಸಿದರು. ಸುಮಾರು 36 ಮಂದಿ ರಕ್ತದಾನ ಮಾಡಿದರು. ಕುಮಾರ ನರಸಿಂಹ ಸ್ವಾಗತಿಸಿ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಮೂರು ಗ್ರಾಮದ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here