ನಾಳೆ (ಮಾ.6) ಕೊಳ್ನಾಡು ಪಂಚಾಯತ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಪ್ರಾರಂಭ

0

ಪುತ್ತೂರು : ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಮಾ.6 ರಿಂದ 20 ವರೆಗೆ , ಸುಮಾರು 15 ದಿನಗಳ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರ ಕಾರ್ಯಕ್ರಮ ಜರುಗಲಿದೆ.
ಯಾವುದೇ ರೀತಿಯ ಔಷಧವಿಲ್ಲದೆಯೇ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಫಿಯೂ ಪ್ರತಿದಿನವೂ ಬೆ.9 -30 ರಿಂದ ಸಂಜೆ 4-30 ರ ವರೆಗೆ ನಡೆಯಲಿದೆ.

ಮಾ.6 ರಂದು ನಡೆಯುವ ಶಿಬಿರದ ಉದ್ಘಾಟನೆಯನ್ನು ಕೊಳ್ನಾಡು ಪಂಚಾಯತ್ ಅಧ್ಯಕ್ಷ ಆಶ್ರಫ್ ಕೆ ನೆರವೇರಿಸಿ , ಶುಭ ಹಾರೈಸಲಿರುವರು.ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟ‌ರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಲಿದ್ದು , ಮುಖ್ಯ ಅತಿಥಿಗಳಾಗಿ ಕೊಳ್ನಾಡು ಪಂಚಾಯತ್ ಉಪಾಧ್ಯಕ್ಷೆ ಆಸ್ಮ ಹಸೈನಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಉಚಿತ ಥೆರಪಿಯ ಪ್ರಯೋಜನ ಪಡೆಯುವಂತೆ ಸಂಸ್ಥೆ ಮುಖ್ಯಸ್ಥ ಕೆ.ಪ್ರಭಾಕರ ಸಾಲ್ಯಾನ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here