ನೆಲ್ಯಾಡಿ: ಕೂಟೇಲು-ದರ್ಖಾಸು ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

0

ನೆಲ್ಯಾಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‌ನ ಕೂಟೇಲು ದರ್ಖಾಸು ಎಂಬಲ್ಲಿ 7.30 ಲಕ್ಷ ರೂ., ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ ಮಾ.4ರಂದು ನಡೆಯಿತು.

15ನೇ ಹಣಕಾಸು ಯೋಜನೆಯ 4 ಲಕ್ಷ ರೂ. ಹಾಗೂ ಉದ್ಯೋಗ ಖಾತರಿ ಯೋಜನೆಯ 3.60 ಲಕ್ಷ ರೂ, ಅನುದಾನದಲ್ಲಿ ಒಟ್ಟು 152 ಮೀ. ಉದ್ದದ ರಸ್ತೆ ನಿರ್ಮಾಣಗೊಂಡಿದೆ. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಶ್ಮಾಶಶಿ ಅವರು ರಿಬ್ಬನ್ ಕತ್ತರಿಸುವ ಮೂಲಕ ರಸ್ತೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಪಿ ತೋಮಸ್, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ, ಲೆಕ್ಕ ಸಹಾಯಕ ಅಂಗು, ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಗ್ರಾಮಸ್ಥರಾದ ನಜೀರ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಮಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಉಪಾಧ್ಯಕ್ಷೆ ರೇಶ್ಮಾಶಶಿ ವಂದಿಸಿದರು.

ಭರವಸೆ ಈಡೇರಿತು:
ನೆಲ್ಯಾಡಿ ಗ್ರಾಮ ಪಂಚಾಯಿತಿನ ಇತಿಹಾಸದಲ್ಲಿ ಒಂದೇ ಬಾರಿಗೆ ಅತ್ಯಂತ ದೊಡ್ಡ ಮೊತ್ತದಲ್ಲಿ ನಡೆದಿರುವ ರಸ್ತೆ ಕಾಂಕ್ರಿಟೀಕರಣ ಇದಾಗಿದೆ. ಈ ಪ್ರದೇಶದ ಹಲವು ವರುಷಗಳ ಬೇಡಿಕೆಯನ್ನು ಹಾಗೂ ಮತದಾನದ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ಇದೆ.
-ಮಹಮ್ಮದ್ ಇಕ್ಬಾಲ್, ಗ್ರಾ.ಪಂ.ಸದಸ್ಯ

LEAVE A REPLY

Please enter your comment!
Please enter your name here