





ಪುತ್ತೂರು: ಮುಖ್ಯರಸ್ತೆಯ ಸಿಪಿಸಿ ಪ್ಲಾಝಾದಲ್ಲಿನ ಮಕ್ಕಳ ತಜ್ಞರಾದ ಡಾ.ಮಂಜುನಾಥ ಶೆಟ್ಟಿ ಮತ್ತು ಮಲ್ಲಿಕಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮಾಧುರ್ಯ ಶೆಟ್ಟಿಯವರು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ. 2022-23ನೇ ಸಾಲಿನಲ್ಲಿ ನಡೆಸಿದ ಎಂ.ಡಿ ಪರೀಕ್ಷೆಯ ಫಾರ್ಮಾಕಾಲಜಿ(ಔಷಧಶಾಸ್ತ್ರ) ವಿಭಾಗದಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ.



ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜ್ನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದ ಡಾ.ಮಾಧುರ್ಯ ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಎಂ.ಡಿ ಪದವಿಯನ್ನು ಪಡೆದಿದ್ದಾರೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುದಾನ ರೆಸಿಡೆನ್ಶಿಯಲ್ ಶಾಲೆಯಲ್ಲಿ ಪಡೆದ ಅವರು ವಿವೇಕಾನಂದ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ.















