ಪುತ್ತೂರು: ಕೊಳ್ತಿಗೆ ಪೆರ್ಲಂಪಾಡಿ ಉದಯಗಿರಿಯಲ್ಲಿ ನಡೆಯುವ ಊರ ಜಾತ್ರೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.14 ಮತ್ತು 15 ರಂದು ವಿಜೃಂಭಣೆಯಿಂದ ನಡೆಯಲಿದೆ. ಮಾ.14 ರಂದು ಸಂಜೆ ಬಾಯಂಬಾಡಿ ಮಣ್ಣಾಪು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಬರುವುದು, ಸಿಆರ್.ಸಿ ಕಾಲೋನಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ಬಂದು ಅಲ್ಲಿಂದ ದುರುಶನದಿಂದ ಉದಯಗಿರಿಗೆ ತೆರಳುವುದು, ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 11ಕ್ಕೆ ಕುಳಿಚಟ್ಟು ದೈವದ ನರ್ತನ, ಮಾ.15 ರ ಪ್ರಾತಃಕಾಲ 4 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಲಕ್ಕೆ ಹೋಗುವುದು ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 7.30 ಕ್ಕೆ ಗುಳಿಗ ನೇಮ ನಡೆಯಲಿದೆ.
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಮಾ.14 ರಂದು ಬೆಳಿಗ್ಗೆ ಪೆರ್ಲಂಪಾಡಿ ಉದಯಗಿರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮೊದಲಿಗೆ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ವೈವಿಧ್ಯ
ಮಾ.14 ರಂದು ರಾತ್ರಿ ಶ್ರೀ ಸಾಯಿ ಫ್ರೆಂಡ್ಸ್ ಪೆರ್ಲಂಪಾಡಿ ಇವರ ಪ್ರಾಯೋಜಕತ್ವದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಅಭಿನಯಿಸುವ ‘ಮಗಲ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಇದಲ್ಲದೆ ಊರಿನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಭಕ್ತಾಧಿಗಳು ಊರ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಗಂಧಪ್ರಸಾದ ಸ್ವೀಕರಿಸುವಂತೆ ಆಡಳಿತ ಸಮಿತಿಯ ಅಧ್ಯಕ್ಷ ತಾರಾಪ್ರಸಾದ್ ರಾಮಕಜೆ, ಪ್ರ.ಕಾರ್ಯದರ್ಶಿ ಗಿರೀಶ್ ಪಾದೆಕಲ್ಲು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಿರೀಶ್ ಮಳಿ ಹಾಗೂ ಸರ್ವ ಸದಸ್ಯರುಗಳು, ಊರಿನ ಸಮಸ್ತರು ತಿಳಿಸಿದರು.