ಕಾವು:ಮಾಡ್ನೂರು ಗ್ರಾಮದ ನನ್ಯ ಅಂಗನವಾಡಿಯ ಶ್ರೀದೇವಿ ಮತ್ತು ಪ್ರಗತಿ ಸ್ತ್ರಿಶಕ್ತಿ ಗುಂಪಿನ ನೇತೃತ್ವದಲ್ಲಿ ಕಾವು ಸಮುದಾಯ ಭವನದಲ್ಲಿ ಗೊಂಚಲು ಸಭೆ ಮತ್ತು ಮಹಿಳಾ ದಿನಾಚರಣೆ ಮಾ 11 ರಂದು ನಡೆಯಿತು. ಕಾರ್ಯಕ್ರಮ ವನ್ನು ಗೊಂಚಲುನ ಅಧ್ಯಕ್ಷರಾದ ಲಕ್ಷ್ಮಿ ಉದ್ಘಾಟಿಸಿದರು.ನಂತರ ಇಂಚರ ಫೌಂಡೇಶನ್ ಕೌನ್ಸಿಲಿಂಗ್ ಪುತ್ತೂರು ಮುಖ್ಯಸ್ಥರಾದ ಸೌಮ್ಯ ಮಕ್ಕಳ ಹಕ್ಕು, ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಆರ್ಥಿಕ ಸಾಕ್ಷರತಾ ಪುತ್ತೂರು ಇದರ ಅಧಿಕಾರಿ ಗೀತಾ ಇವರು ಗುಂಪಿನ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಅಂಗನವಾಡಿ ಮೇಲ್ವಿಚಾರಕಿ ಸುಲೋಚನ ರವರು ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು . ಆರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಹಾಗೂ ಸದಸ್ಯರಾದ ಲೋಕೇಶ್ ಚಾಕೋಟೆ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ ಮಧುಮತಿ ಮಾಣಿಯಡ್ಕ, ರೇವತಿ ಮಾಣಿಯಡ್ಕ, ಬೇಬಿ ಆಮ್ಚಿನಡ್ಕ,ಗಿರಿಜಾ ಕಾವು ಇವರುಗಳಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಪ್ರತಿನಿಧಿ ಶ್ಯಾಮಲಾ,ಅರಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ,ಸದಸ್ಯರಾದ ಹೇಮಾವತಿ ಚಾಕೋಟೆ,ಜಯಂತಿ ಪಟ್ಟುಮೂಲೆ ಉಪಸ್ಥಿತರಿದ್ದರು. ಪ್ರತಿಮಾ ನಿಧಿಮುಂಡ ಪ್ರಾರ್ಥಿಸಿದರು. ಉಷಾ ವಿದ್ಯಾಶ್ರೀ ನನ್ಯ ಸ್ವಾಗತಿಸಿದರು. ಜಯಲಕ್ಷ್ಮಿ ವಂದಿಸಿದರು. ರೂಪ ಮಂಜಲ್ತಡ್ಕ ವಿಜೇತರ ಪಟ್ಟಿ ವಾಚಿಸಿದರು. ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.