ಬಿಜೆಪಿ ಜೊತೆ ಸಂಪೂರ್ಣವಾಗಿ ಕೈ ಜೋಡಿಸಿ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ: ರಾಜಾರಾಮ್ ಭಟ್
ಪುತ್ತೂರು :ರಾಜಕೀಯದಿಂದ ದೂರ ಎಂದಿದ್ದ ರಾಜಾರಾಮ್ ಭಟ್ ಮತ್ತೆ ಮುನ್ನೆಲೆಗೆ ಬಂದಿದ್ದು,ಕೆಲ ದಿನಗಳ ಹಿಂದೆ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದ ರಾಜಾರಾಮ್ ಭಟ್ ಈಗ ಮೊದಲಿನಂತೆಯೇ ರಾಜಕೀಯದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಲೈವ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿದ ರಾಜರಾಮ್ ಭಟ್ ಕೆಲ ದಿನಗಳ ಹಿಂದೆ ಫೇಸ್ಟುಕ್ ಲೈವ್ ಮೂಲಕ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದು, ಆದರೇ ಈ ವಿಚಾರವಾಗಿ ಹಲವಾರು ಮಂದಿ ಕಾರ್ಯಕರ್ತರು, ಸ್ನೇಹಿತರು, ಅಣ್ಣ-ತಮ್ಮಂದಿರು ರಾಜಾರಾಮ್ ಭಟ್ರೇ ನೀವು ಹೋಗಬೇಡಿ ನಮ್ಮ ಜೊತೆಗಿರಿ ಎಂದು ಹೇಳಿದ್ದರು. ಹಾಗಾಗಿ ನನಗೆ ಅವರ ಮನಸ್ಸಿಗೆ ಕಷ್ಟ ಆಗುವ ರೀತಿಯಲ್ಲಿ ನಡೆದುಕೊಳ್ಳಲು ಇಷ್ಟವಿಲ್ಲ ಎಂದರು. ಪುತ್ತಿಲ ಪರಿವಾರದೊಂದಿಗೆ ಅಭಿಪ್ರಾಯ ವ್ಯತ್ಯಾಸವಾಗಿಯೋ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಲ್ಲ. ನನ್ನ ತೀರ್ಮಾನ ನಿಮ್ಮ ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ., ಕಾರ್ಯಕರ್ತರನ್ನು ಬಿಟ್ಟು ನನಗೂ ಒಬ್ಬನೇ ಇರಲು ಆಗುವುದಿಲ್ಲ., ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳದೆ ಇರುವುದಕ್ಕೂ ಸಾಧ್ಯವಿಲ್ಲ., ಅಂತಹ ಅವಿನಾಭಾವ ಸಂಬಂಧ ನನಗೂ ಪುತ್ತಿಲಪರಿವಾರಕ್ಕೂ ಹಾಗೂ ಪುತ್ತಿಲಹರಿವಾರದಲ್ಲಿ ಗುರುತಿಸಿಕೊಂಡ ಕಾರ್ಯಕರ್ತರ ನಡುವೆ ಇದೆ.ಕಾರ್ಯಕರ್ತರಿಲ್ಲದೆ ಯಾವ ಪಕ್ಷವೂ ಇಲ್ಲ., ಅದಕ್ಕೆ ಉದಾಹರಣೆ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯ ಫಲಿತಾಂಶ. ಮನಸ್ಸಿಗೆ ಕಷ್ಟವಾಗಿ ನಾನು ರಾಜಕೀಯ ನಿವೃತ್ತಿ ಪಡೆದಿಲ್ಲ ಎಂದಿದ್ದಾರೆ.
ಬಿಜೆಪಿ ಜೊತೆ ಸಂಪೂರ್ಣವಾಗಿ ಕೈ ಜೋಡಿಸಿ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಂದಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಅಧಿಕ ಬಹುಮತದಿಂದ ಗೆಲ್ಲಿಸುವಂತಹ ಸಂಕಲ್ಪ ನಾವೆಲ್ಲರೂ ಸೇರಿ ಮಾಡಲು ಹೊರಟಿದ್ದೇವೆ ಎಂದು ತಿಳಿಸಿದ್ದಾರೆ,