ರಾಷ್ಟ್ರಮಟ್ಟದ ಇನ್ಸೆಫ್ ರೀಜನಲ್ ಫೇರ್‌ 2024 – ಸುದಾನ ಶಾಲೆಯ ಅದ್ವಿಜ್ ಸಜೇಶ್ ಗೆ ಕಂಚು

0

ಪುತ್ತೂರು:ಇಂಡಿಯನ್ ಸಯನ್ಸ್ ಮತ್ತು ಎಂಜಿನಿಯರಿಂಗ್ ಫೇರ್ ವತಿಯಿಂದ ಗುಜರಾತಿನ ರಾಜ್‌ಕೋಟ್‌ನಲ್ಲಿರುವ ಕೆ.ಜಿ ಧೋಲಕಿ ಸ್ಕೂಲ್‌ನಲ್ಲಿ ಜ.26 ನಡೆದ 2024 ರ ಇನ್ಸೆಫ್ ರೀಜನಲ್ ಫೇರ್‌ನಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿ ಅದ್ವಿಜ್ ಸಜೇಶ್ (8ನೇ, ಸಜೇಶ್ ಆನಂದ್, ರಜಿತಾ ಸಜೇಶ್ ರವರ ಪುತ್ರ) ರವರು ಪ್ರಸ್ತುತಪಡಿಸಿದ ಅಂಡರ್ ವಾಟರ್ ರೆಸ್ಪಿರೇಟರ್ ಎಂಬ ಪ್ರಾಜೆಕ್ಟ್‌ಗೆ ಕಂಚಿನ ಪದಕ ಲಭಿಸಿದೆ.

ಇವರಿಗೆ ವಿಜ್ಞಾನ ಶಿಕ್ಷಕಿಯರಾದ ಪ್ರತಿಮಾ ಎನ್ ಜಿ, ಶ್ಯಾಮ ಡಿ. ಬಂಗೇರ, ಹರ್ಷಿತಾ ಪ್ರಜ್ವಲ್, ಮತ್ತು ರೀನಾ ಅಲೆಕ್ಸ್ ಮಾರ್ಗದರ್ಶನ ಮಾಡಿದ್ದರು. ಸುದಾನ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ವಿಜೇತ ವಿದ್ಯಾರ್ಥಿಯನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here