ಪುತ್ತೂರು: 2018ರಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆ ಬಲತೋಟ ಆಮ್ಕೆ ಎಂಬಲ್ಲಿ ಚಾರ್ಲಿ ಮೇನೇಜಸ್ ಎಂಬವರು ಅಪ್ರಾಪ್ತ ಬಾಲಕನನ್ನು ಥಳಿಸಿ ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ ಪುತ್ತೂರತು ನ್ಯಾಯಾಲಯ ಆದೇಶಿಸಿದೆ. ಪುತ್ತೂರು ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್ ಆರ್ ಶಿವಣ್ಣ ಮಾ.21ರಂದು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಎಪಿಪಿ ಕವಿತಾ ವಾದ ಮಂಡಿಸಿದ್ದರು.
©