ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ಸಾವು

0

ಉಪ್ಪಿನಂಗಡಿ: ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ಮಾ.24ರಂದು ನಡೆದಿದೆ.
ಸವಣೂರು ಸಮೀಪದ ಅಂಕತ್ತಡ್ಕದ ಮಂಜುನಾಥ್ (35) ಮೃತ ವ್ಯಕ್ತಿ. ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ಹಿನ್ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಇವರು ನೀರಿನಲ್ಲಿ ಮುಳುಗಿದರು. ಆಗ ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಅಕ್ಕಪಕ್ಕದಲ್ಲಿದ್ದವರೆಲ್ಲಾ ಓಡಿ ಬಂದು ಹಗ್ಗದ ಸಹಾಯದಿಂದ ನದಿ ನೀರಿಗಿಳಿದು ಇವರನ್ನು ಮೇಲೆತ್ತಿ ತಂದು ಪ್ರಥಮ ಚಿಕಿತ್ಸೆಯ ಬಳಿಕ ಆಂಬುಲೆನ್ಸ್ ಮೂಲಕ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here