ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತಗೆ ರೂ.5.18 ಕೋಟಿ ನಿವ್ವಳ ಲಾಭ

0

ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 19 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2023-24 ಆರ್ಥಿಕ ವರ್ಷಾಂತ್ಯಕ್ಕೆ ರೂ.5.18ಕೋಟಿ ನಿವ್ವಳ ಲಾಭ ಗಳಿಸಿದೆ. ಸಹಕಾರಿಯು ಈ ಆರ್ಥಿಕ ವರ್ಷಾಂತ್ಯಕ್ಕೆ 45077 ಸದಸ್ಯರಿಂದ ರೂ 9.75 ಕೋಟಿ ಪಾಲು ಬಂಡವಾಳವನ್ನು ಸಂಗ್ರಹಿಸಲಾಗಿದೆ. ರೂ. 316 ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ಶೇ.23 ಹಾಗೂ ರೂ.287 ಕೋಟಿ ಸಾಲವನ್ನು ವಿತರಿಸಿ ಶೇ.26 ಪ್ರಗತಿಯನ್ನು ದಾಖಲಿಸಿರುತ್ತದೆ. ಒಟ್ಟು ವ್ಯವಹಾರ ರೂ 603 ಕೋಟಿ ಆಗಿದೆ ಶೇ.24 ಪ್ರಗತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಕೂಡ ಈ ವರ್ಷ ಗಣನೀಯ ಪ್ರಗತಿಯಾಗಿದ್ದು ಕೇವಲ ಶೇ.1.45 ರಷ್ಟು ದಾಖಲಾಗಿರುತ್ತದೆ. ಸಹಕಾರಿಯು ರೂ.37 ಕೋಟಿ ಸ್ವಂತ ನಿಧಿಯನ್ನು ಹೊಂದಿದೆ. ಈ ಆರ್ಥಿಕ ವರ್ಷದಲ್ಲಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಹಾಗೂ ಉಳ್ಳಾಲ ತಾಲೂಕಿನ ಮುಡಿಪುನಲ್ಲಿ ಶಾಖೆಗಳನ್ನು ತೆರೆಯಲಾಗಿದ್ದು, ರಾಜ್ಯಾದ್ಯಂತ 19 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಸಹಕಾರಿಯು ಕೇವಲ ಲಾಭಗಳಿಸುವುದಷ್ಟೆ ಮೂಲ ಉದ್ದೇಶವನ್ನಾಗಿರಿಸದೆ ಸಾಮಾಜಿಕ ಬದ್ದತೆಗಾಗಿ ಪೂರಕ ಸಂಸ್ಥೆಯಾಗಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪಿಸಿ ಇದರ ಮೂಲಕ ಆಶಕ್ತರಿಗೆ ನೆರವು, ಆರೋಗ್ಯ ಶಿಬಿರಗಳು, ಸಾವಯವ ಕೃಷಿ ತರಬೇತಿ, ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಗುತ್ತಿದೆ.
ಸಹಕಾರಿ ಸಂಘದಲ್ಲಿ ಸದಸ್ಯರಿಗೆ ತ್ವರಿತ ಸೇವೆಯನ್ನು ನೀಡುವ ಸಲುವಾಗಿ ಸಿ ಬಿ ಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್,ಆಯ್ದ ಶಾಖೆಗಳಲ್ಲಿ ಸೇಫ್ ಲಾಕರ್ ಮುಂತಾದ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಸಹಕಾರಿಯ ಪ್ರಗತಿಯಲ್ಲಿ ಕೈ ಜೋಡಿಸುವಂತೆ ಸಹಕಾರಿಯ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸಂತ ನಾಯಕ್ ಎ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಸಹಕಾರಿ ಸಂಘವು ಕೇವಲ ಲಾಭಗಳಿಸುವುದೇ ಮೂಲ ಉದ್ದೇಶವಾಗಿರಿಸದೇ, ಸಾಮಾಜಿಕ ಬದ್ಧತೆಯೊಂದಿಗೆ ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇದರ ಮೂಲಕ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿ

– ಎಸ್ ಆರ್ ಸತೀಶ್ಚಂದ್ರ (ಅಧ್ಯಕ್ಷರು)

2024 ಮಾರ್ಚ್ ಅಂತ್ಯಕ್ಕೆ ರೂ.316 ಕೋಟಿ ಠೇವಣಾತಿ ಸಂಗ್ರಹಿಸಿ, ರೂ. 287 ಕೋಟಿ ಸಾಲವಿತರಿಸಿ ಒಟ್ಟು ರೂ.603 ಕೋಟಿ ವ್ಯವಹಾರ ಹೊಂದಿದ್ದು, ಒಟ್ಟು ವ್ಯವಹಾರದಲ್ಲಿ ಶೇ.24 ಪ್ರಗತಿಯನ್ನು ದಾಖಲಿಸಿದೆ. ನಿವ್ವಳ ಲಾಭ 5.18 ಕೋಟಿ ಗಳಿಸಿದೆ. ಸಾಲ ವಸೂಲಾತಿಯಲ್ಲಿ ಕೂಡ ಉತ್ತಮ ಪ್ರಗತಿಯನ್ನು ಕಂಡಿದ್ದು ಶೇ. 1.45 ರಷ್ಟು ಹೊಂದಿರುತ್ತದೆ.

ವಸಂತ ನಾಯಕ್ ಎ (ಮುಖ್ಯಕಾರ್ಯನಿರ್ವಹಣಾಧಿಕಾರಿ)

LEAVE A REPLY

Please enter your comment!
Please enter your name here