ಸೇನೆಯಿಂದ ನಿವೃತ್ತರಾದ ಎಸಿಪಿ ಹವಾಲ್ದಾರ್ ಜಯಕುಮಾರ್ ರವರಿಗೆ ಹುಟ್ಟೂರಿನಲ್ಲಿ ಸ್ವಾಗತ

0

ಪುತ್ತೂರು: ಭಾರತೀಯ ಭೂ ಸೇನೆಯಲ್ಲಿ ಸುಮಾರು 22 ವರುಷಗಳ ಸೇವೆ ಸಲ್ಲಿಸಿ, ಮಾ.31 ರಂದು ಸೇನೆಯಿಂದ ನಿವೃತ್ತರಾದ ಮೂಲತಃ ಕೊಡಿಪ್ಪಾಡಿ ಗ್ರಾಮದ ಪಲ್ಲತ್ತಾರು ಲಿಂಗಪ್ಪ ಪೂಜಾರಿ ಮತ್ತು ಕಮಲ ಲಿಂಗಪ್ಪ ದಂಪತಿ ಪುತ್ರ, ಪ್ರಸ್ತುತ ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿ ಜಯಕುಮಾರ್ ಪಿ ಇವರನ್ನು ಏ.1 ರಂದು ಪುಣ್ಯ ಕುಮಾರ ಯುವಕ ಮಂಡಲ ಇದರ ವತಿಯಿಂದ ಪುತ್ತೂರಿನಲ್ಲಿ ಸ್ವಾಗತಿಸಿ, ಹುಟ್ಟೂರಿಗೆ ಬರಮಾಡಿಕೊಳ್ಳಲಾಯಿತು.


ಈ ವೇಳೆ ಪುಣ್ಯ ಕುಮಾರ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರುಗಳು, ಜಯಕುಮಾರ್ ಅವರ ಮಾತೃಶ್ರೀ ಕಮಲ, ಪತ್ನಿ ಸುಪ್ರೀತಾ, ಪುತ್ರ ಸುಜಶ್, ಅತ್ತೆ ಗುಲಾಬಿ, ಬಾವಂದಿರಾದ ಎಸ್.ಕೆ.ಟ್ರಾನ್ಸ್ಫೋರ್ಟ್ ನಿತಿನ್ ಹಾಗೂ ಬೆಂಗಳೂರಿನ ಭರಣಿ ಎಂಟರ್ಪ್ರೈಸ್ ನ ರಂಜಿತ್ ಸಹಿತ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here