ವೇದಿಕೆಯ ಹಿಂಬದಿಯಲ್ಲಿದ್ದ ಪುತ್ತಿಲರಿಗೆ ‘ಫ್ರಂಟ್ ಲೈನ್’ ನೀಡಿದ ಸಿಂಹ

0

ಪುತ್ತೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶವು ಏ.2ರಂದು(ಇಂದು)ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಒಂದು ಅಚ್ಚರಿಯ ಬೆಳವಣಿಗೆಯೊಂದು ನಡೆಯಿತು.ಸಮಾವೇಶದಲ್ಲಿ ವೇದಿಕೆಯ ಹಿಂಬದಿಯ ಆಸನದಲ್ಲಿ ಕುಳಿತ ಅರುಣ್ ಕುಮಾರ್ ಪುತ್ತಿಲ ಅವರನ್ನು ವೇದಿಕೆಯ ಮುಂಭಾಗಕ್ಕೆ ಒತ್ತಾಯಪೂರ್ವಕವಾಗಿ ತನ್ನ ಜೊತೆ ಕೂರಿಸಿಕೊಂಡ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹರ ನಡೆ ಅನೇಕರಿಗೆ ಅಚ್ಚರಿ ತರಿಸಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ಎರಡು ಸೆಟ್‌ ಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು .ಮೊದಲ ಆಸನಗಳಲ್ಲಿ ಪುತ್ತಿಲರು ಕೂರದೆ ಹಿಂಬದಿಯ ಆಸನವನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಪ್ರತಾಪ್‌ ಸಿಂಹ ಆರಂಭದಲ್ಲೇ ಅವರನ್ನು ಮುಂಬಾಗಕ್ಕೆ ಕರೆಸಿ ತನ್ನ ಪಕ್ಕದಲ್ಲೆ ಕೂರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

LEAVE A REPLY

Please enter your comment!
Please enter your name here